ಕೆಆರ್ ಎಸ್ ಜಲಾಶಯದಲ್ಲಿನ ವಸ್ತುಸ್ಥಿತಿ ಅರಿಯಲು ಮಾಧ್ಯಮದೊಂದಿಗೆ ಒಳಹೋಗಲು ಬಿಜೆಪಿ ನಿಯೋಗಕ್ಕೆ ಬಿಡುತ್ತಿಲ್ಲ: ಬಸವರಾಜ ಬೊಮ್ಮಾಯಿ, ಶಾಸಕ
ಕರ್ನಾಟಕ ಸರಕಾರ 5,000 ಕ್ಯುಸೆಕ್ಸ್ ಗಿಂತ ಜಾಸ್ತಿ ನೀರನ್ನು ಬಿಡುತ್ತಿರುವ ಸಂಶಯ ಹುಟ್ಟಿಕೊಂಡಿರುವುದರಿಂದ ಒಳಗಡೆ ಹೋಗಿ ಒಳಹರಿವಿನ ವಿವರ ನೋಡಿದರೆ ಗೊತ್ತಾಗುತ್ತದೆ. ಜಲಾಶಯದಲ್ಲಿನ ವಸ್ತುಸ್ಥಿತಿ ಅರಿಯುವುದು ಮತ್ತು ಮುಂದೆ ಅನಾಹುತ ಆಗದಂತೆ ಸರ್ಕಾರವನ್ನು ಎಚ್ಚರಿಸುವುದು ನಿಯೋಗದ ಉದ್ದೇಶವಾಗಿದೆ ಎಂದು ಬೊಮ್ಮಾಯಿ ಹೇಳಿದರು
ಮಂಡ್ಯ: ಕೆಆರ್ ಎಸ್ ಜಲಾಶಯದಿಂದ (KRS Dam) ತಮಿಳುನಾಡುಗೆ ನೀರಿ ಹರಿಬಿಡುತ್ತಿರುವ ಹಿನ್ನೆಲೆಯಲ್ಲಿ ಡ್ಯಾಂನಲ್ಲಿನ ಸ್ಥಿತಿ ತಿಳಿಯಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನೇತೃತ್ವದ ಬಿಜೆಪಿ ನಾಯಕರ ನಿಯೋಗವೊಂದು ಅಗಮಿಸಿದಾಗ ಮಾಧ್ಯಮದವರೊಂದಿಗೆ ಒಳಗೆ ಪ್ರವೇಶಿಸಲು ಅನುಮತಿ ನಿರಾಕರಿಸಲಾಯಿತು. ಜಲಾಶಯದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬೊಮ್ಮಯಿ, ನಿಯೋಗದ 10-12 ಜನಕ್ಕೆ ಒಳಗಡೆ ಹೋಗಲು ಬಿಡಲಾಗುತ್ತದೆ ಅಂತ ಹೇಳುತ್ತಿದ್ದಾರೆ, ಈ ಹಿಂದೆ ಮಿಡಿಯಾದವರನ್ನು (media) ಒಳಗಡೆ ಬಿಟ್ಟಿಲ್ಲ ಅಂತಾದ್ರೆ ಸರಿ, ಅಭ್ಯಂತರವೇನೂ ಇಲ್ಲ, ಆದರೆ ಮೊದಲು ಮಿಡಿಯಾಗೆ ಪ್ರವೇಶದ ಅನುಮತಿ ನೀಡಿ ಈಗ ನಿರಾಕರಿಸುತ್ತಿದ್ದರೆ ಅದಕ್ಕೆ ವಿವರಣೆ ಬೇಕು ಎಂದು ಬೊಮ್ಮಾಯಿ ಹೇಳಿದರು. ಕರ್ನಾಟಕ ಸರಕಾರ (Karnataka government) 5,000 ಕ್ಯುಸೆಕ್ಸ್ ಗಿಂತ ಜಾಸ್ತಿ ನೀರನ್ನು ಬಿಡುತ್ತಿರುವ ಸಂಶಯ ಹುಟ್ಟಿಕೊಂಡಿರುವಿದರಿಂದ ಒಳಗಡೆ ಹೋಗಿ ಒಳಹರಿವಿನ ವಿವರ ನೋಡಿದರೆ ಗೊತ್ತಾಗುತ್ತದೆ. ಜಲಾಶಯದಲ್ಲಿನ ವಸ್ತುಸ್ಥಿತಿ ಅರಿಯುವುದು ಮತ್ತು ಮುಂದೆ ಅನಾಹುತ ಆಗದಂತೆ ಸರ್ಕಾರವನ್ನು ಎಚ್ಚರಿಸುವುದು ನಿಯೋಗದ ಉದ್ದೇಶವಾಗಿದೆ ಎಂದು ಬೊಮ್ಮಾಯಿ ಹೇಳಿದರು. ಮಾಜಿ ಸಚಿವರಾದ ಗೋವಿಂದ ಕಾರಜೋಳ, ಡಾ ಅಶ್ವತ್ಥ್ ನಾರಾಯಣ, ಕೆ ಗೋಪಾಲಯ್ಯ, ಆರ್ ಅಶೋಕ, ಸಂಸದೆ ಸುಮಲತಾ, ಸಂಸದ ಪ್ರತಾಪ್ ಸಿಂಹ ಮೊದಲಾದವರು ನಿಯೋಗದಲ್ಲಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ