ವಕ್ಫ್ ಜಮೀನು ವಿವಾದ: ವಿಜಯಪುರದಲ್ಲಿ ಮುಂದುವರಿದ ಬಿಜೆಪಿ ನಾಯಕರ ಅಹೋರಾತ್ರಿ ಹೋರಾಟ
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ರೈತರಿಗೆ ನೀಡಿರುವ ನೋಟೀಸ್ಗಳನ್ನು ವಾಪಸ್ಸು ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ. ಪ್ರತಿಭಟನೆಕಾರರು ಕೇವಲ ನೋಟೀಸಲ್ಲ ಗೆಜೆಟ್ ನೋಟಿಫಿಕೇಶನ್ ಅನ್ನು ರದ್ದು ಮಾಡಬೇಕೆಂದು ಹೇಳುತ್ತಿದ್ದಾರೆ.
ವಿಜಯಪುರ: ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಸ್ಥಳೀಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಮುಖಂಡರು ರೈತರ ಮತ್ತು ಜಿಲ್ಲೆಯ ಇತರ ಜಮೀನು ದಾಖಲೆಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿರುವುದನ್ನು ಖಂಡಿಸಿ ನಡೆಸುತ್ತಿರುವ ಅನಿರ್ಧಾಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮೂರನೇ ದಿನವೂ ಮುಂದುವರಿದಿದೆ. ಸತ್ಯಾಗ್ರಹಕ್ಕಾಗಿ ನಿರ್ಮಿಸಿದ ಟೆಂಟ್ನಲ್ಲೇ ಕಳೆದ ರಾತ್ರಿ ಯತ್ನಾಳ್ ಮತ್ತು ಇತರ ಮುಖಂಡರು ಊಟ ಮಾಡಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕರ್ನಾಟಕದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ, ಸಿದ್ದರಾಮಯ್ಯ ಸಿಎಂ ಆದಮೇಲೆ ಹಿಟ್ಲರ್ ಆಗಿದ್ದಾರೆ: ಶೋಭಾ ಕರಂದ್ಲಾಜೆ ವಾಗ್ದಾಳಿ
Published on: Nov 06, 2024 10:32 AM