ಬೆಳಗಾವಿ ಅಧಿವೇಶನ: ವಿಪಕ್ಷ ಸದಸ್ಯರು ಸದನದ ಸಮಯ ಹಾಳು ಮಾಡಿ ರಾಜ್ಯದ ಜನತೆಗೆ ದ್ರೋಹವೆಸಗುತ್ತಿದ್ದಾರೆ: ಸಿದ್ದರಾಮಯ್ಯ

|

Updated on: Dec 06, 2023 | 5:03 PM

ಬರ, ಉತ್ತರ ಕರ್ನಾಟಕದ ಸಮಸ್ಯೆ ಮೊದಲಾದ ಎಲ್ಲ ವಿಷಯಗಳ ಮೇಲೆ ಚರ್ಚೆ ನಡೆಸಲು ಸರ್ಕಾರ ತಯಾರಿದೆ, ವಿರೋಧ ಪಕ್ಷದ ನಾಯಕ ಆರ್ ಅಶೋಕ ನಿನ್ನೆ ಬರದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ ಆದರೆ ಚರ್ಚೆ ಅಪೂರ್ಣವಾಗಿದೆ. ವಿಪಕ್ಷ ನಾಯಕರ ಸಲಹೆ ಕೇಳಲು ಮತ್ತು ಸರ್ಕಾರ ಎಲ್ಲಿ ಎಡವಿದೆ ಅಂತ ತಿಳಿದುಕೊಳ್ಳಲು ತಾವು ನಿನ್ನೆಯಿಂದ ಸದನದಲ್ಲಿ ಕುಳಿತಿರುವುದಾಗಿ ಮುಖ್ಯಮಂತ್ರಿ ಹೇಳಿದರು.

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯನವರ (CM Siddaramaiah) ಮಾತೇ ಹಾಗೆ, ಸದನದಲ್ಲಿ ಕಾರ್ಯಕಲಾಪ ನಡೆಯುವಾಗ ಮಾತಾಡಲು ಎದ್ದುನಿಂತರೆ ಉಳಿದವರು ಕುಳಿತುಕೊಂಡು ಕೇಳಬೇಕು. ಇವತ್ತು ಸದನದಲ್ಲಿ ಬಿಜೆಪಿ ಕಾರ್ಯಕರ್ತನ (BJP worker) ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕರು ಗೃಹ ಸಚಿವ (home minister) ಮತ್ತು ಸರ್ಕಾರದ ಹೇಳಿಕೆ ಆಗ್ರಹಿಸಿ ಸದನದಲ್ಲಿ ಧರಣಿ ಶುರುಮಾಡಿದಾಗ ಮಾತಾಡಲು ಎದ್ದು ನಿಂತ ಸಿದ್ದರಾಮಯ್ಯ ಅನುಭವ ಮತ್ತು ವಿಷಯಾಧಾರಿತ ಮಾರುಗಳಿಂದ ವಿಪಕ್ಷ ಶಾಸಕರ ಬಾಯಿ ಮುಚ್ಚಿಸಿದರು. ಸಿದ್ದರಾಮಯ್ಯ ಶಾಂತರಾಗಿಯೇ ವಿಪಕ್ಷದ ಟೀಕೆಗಳಿಗೆ ಉತ್ತರ ನೀಡುತ್ತಾರೆ. ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆದಿರುವುದಕ್ಕೆ ಸಂಬಂಧಿಸಿದಂತೆ, ಗೃಹ ಸಚಿವರು ಹೇಳಿಕೆ ಖಂಡಿತ ನೀಡುತ್ತಾರೆ, ನಿಯಮಾವಳಿಗಳ ಪ್ರಕಾರ ಪ್ರಶ್ನೆ ಕೇಳಿದಾಗ ಕೂಡಲೇ ಉತ್ತರ ನೀಡಬಹುದು ಇಲ್ಲವೇ ಉತ್ತರಿಸಲು ಎರಡು ದಿನಗಳ ಸಮಯಾವಕಾಶ ಇರುತ್ತದೆ. ಗೃಹ ಸಚಿವರು ಸದನಕ್ಕೆ ಬಂದ ಕೂಡಲೇ ಉತ್ತರ ನೀಡಲಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on