AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Former MLA blames partymen; ಕೆಲ ಬಿಜೆಪಿ ನಾಯಕರ ಹೊಂದಾಣಿಕೆ ರಾಜಕಾರಣವೇ ಪಕ್ಷದ ಸೋಲಿಗೆ ಕಾರಣವಾಯಿತು: ಸಿಟಿ ರವಿ

Former MLA blames partymen; ಕೆಲ ಬಿಜೆಪಿ ನಾಯಕರ ಹೊಂದಾಣಿಕೆ ರಾಜಕಾರಣವೇ ಪಕ್ಷದ ಸೋಲಿಗೆ ಕಾರಣವಾಯಿತು: ಸಿಟಿ ರವಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 09, 2023 | 5:04 PM

Share

ಪತ್ರಕರ್ತರೊಬ್ಬರು ಆ ನಾಯಕರ ಹೆಸರು ಹೇಳಬಹುದಾ ಅಂತ ಪ್ರಶ್ನಿಸಿದಾಗ, ಹಾಗೆಲ್ಲ ಬಹಿರಂಗಪಡಿಸಲಾಗದು ಎಂದು ಅವರು ಹೇಳಿದರು.

ನವದೆಹಲಿ: ಮಾಜಿ ಶಾಸಕ ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi), ಕರ್ನಾಟಕದಲ್ಲಿ ಪಕ್ಷದ ಸೋಲಿನ ನಂತರ ಆತ್ಮಾವಲೋಕನ (retrospection) ಮಾಡಿಕೊಂಡಂತಿದೆ. ಇಂದು ನವದೆಹಲಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಹಲವಾರು ವಿಷಯಗಳ ಬಗ್ಗೆ ಮಾತಾಡಿದ ರವಿ, ಬಿಜೆಪಿ ಸೋಲಿಗೆ ಪಕ್ಷದ ಕೆಲ ನಾಯಕರ ಹೊಂದಾಣಿಕೆ (adjustment) ಮತ್ತು ರಾಜಿ ರಾಜಕಾರಣ ಕಾರಣವಾಯಿತು ಎಂದು ಹೇಳಿದರು. ಆಗಲೇ ಆ ನಾಯಕರನ್ನು ಬೀದಿಗೆ ತಂದು ನಿಲ್ಲಿಸಿದ್ದರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುವಂಥ ಸ್ಥಿತಿ ಬರುತ್ತಿರಲಿಲ್ಲ ಎಂದು ರವಿ ಹೇಳಿದರು. ಪತ್ರಕರ್ತರೊಬ್ಬರು ಆ ನಾಯಕರ ಹೆಸರು ಹೇಳಬಹುದಾ ಅಂತ ಪ್ರಶ್ನಿಸಿದಾಗ, ಹಾಗೆಲ್ಲ ಬಹಿರಂಗಪಡಿಸಲಾಗದು ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ