ಗದಗ ನಗರಸಭೆ ಕಚೇರಿಯಲ್ಲೇ ಬಿಜೆಪಿ ಸದಸ್ಯರ ಕಿತ್ತಾಟ, ವಿಡಿಯೋ ವೈರಲ್

| Updated By: ಆಯೇಷಾ ಬಾನು

Updated on: Feb 09, 2024 | 8:58 AM

ಗದಗ ನಗರಸಭೆ ಕಚೇರಿಯಲ್ಲಿ ಬಿಜೆಪಿ ಸ್ಥಾಯಿ ಸಮಿತಿ ಅಧಕ್ಷ ಅನಿಲ್ ಅಬ್ಬಿಗೇರಿ ಮತ್ತು ಬಿಜೆಪಿ ಸದಸ್ಯೆ ವಿಜಯಲಕ್ಷ್ಮೀ ಪತಿ ಶಶಿಧರ ದಿಂಡೂರ ನಡುವೆ ಜಗಳ ನಡೆದಿದೆ. ಜಗಳದ ವಿಡಿಯೋ ವೈರಲ್ ಆಗಿದ್ದು ಸಾರ್ವಜನಿಕರು ಆಕ್ರೋಶ ಹೊರ ಹಾಕಿದ್ದಾರೆ. ಅಭಿವೃದ್ಧಿ ಮಾಡಲು ಮತ ಹಾಕಿದ್ರೆ ಬರೀ ಕಚ್ಚಾಟದಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಗದಗ, ಫೆ.2024: ಗದಗ (Gadag) ನಗರಸಭೆ ಕಚೇರಿಯಲ್ಲೇ ಬಿಜೆಪಿ (BJP) ಸದಸ್ಯರು ಕಿತ್ತಾಡಿದ್ದಾರೆ. ಬಿಜೆಪಿ ಸ್ಥಾಯಿ ಸಮಿತಿ ಅಧಕ್ಷ ಅನಿಲ್ ಅಬ್ಬಿಗೇರಿ ಮತ್ತು ಬಿಜೆಪಿ ಸದಸ್ಯೆ ವಿಜಯಲಕ್ಷ್ಮೀ ಪತಿ ಶಶಿಧರ ದಿಂಡೂರ ನಡುವೆ ಭಾರಿ ಜಗಳ ನಡೆದಿದೆ. ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಅವರ ಚೇಂಬರ್ ನಲ್ಲೇ ಏಕವಚನದಲ್ಲಿ ಜಗಳ ನಡೆದಿದೆ. ಗಲಾಟೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಕ್ಷುಲಕ ಕಾರಣಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಹಾಘೂ ಸದಸ್ಯೆ ಪತಿ ಶಶಿಧರ್ ಕಿತ್ತಾಡಿಕೊಂಡು ಬೀದಿರಂಪ ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಎದುರಲ್ಲೇ ಬೇಜವಾಬ್ದಾರಿ ವರ್ತನೆ ತೋರಿದ್ದಾರೆ. ಅಭಿವೃದ್ಧಿ ಮಾಡಲು ಮತ ಹಾಕಿದ್ರೆ ಬರೀ ಕಚ್ಚಾಟದಲ್ಲೇ ಕಾಲಹರಣ ಮಾಡುತ್ತಿರೋ ಬಿಜೆಪಿ ಆಡಳಿತ ಅಂತ ಕೆಲವರು ಕಿಡಿಕಾರಿದ್ದಾರೆ. ಬಿಜೆಪಿ ನಗರಸಭೆ ಆಡಳಿತದ ವಿರುದ್ಧ ಅವಳಿ ನಗರದ ಜನರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.

ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ