ರೈತರು ಸಾವಿಗೆ ಶರಣಾಗುತ್ತಿರುವ ಬಗ್ಗೆ ಶಿವಕುಮಾರ್, ಇನ್ನೊಬ್ಬ ಮಂತ್ರಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ: ಬಸನಗೌಡ ಯತ್ನಾಳ್
ತೀರ ಹತಾಷ ಸ್ಥಿತಿ ತಲುಪಿದಾಗ, ಬದುಕಲು ಮಾರ್ಗೋಪಾಯವೇ ಕಾಣದಾದಾಗ ರೈತ ಸಾವಿಗೆ ಶರಣಾಗುತ್ತಾನೆ ದುಡ್ಡಿನಾಸೆಗಾಗಿ ಅಲ್ಲ ಎಂದ ಯತ್ನಾಳ್, ಆ ಮಂತ್ರಿಗೆ ತಾನು ರೂ. 5 ಕೋಟಿ ನೀಡುತ್ತ್ತೇನೆ, ಆತ್ಮಹತ್ಯೆ ಮಾಡಿಕೊಳ್ಳಲಿ ಅಂತ ಸವಾಲೆಸೆದರು. ಶಿವಕುಮಾರ್ ಸ್ಥಿತಿವಂತರಾಗಿರುವುದರಿಂದ ಅವರಿಗೆ ರೂ. 25 ಕೋಟಿ ನೀಡುತ್ತೇನೆ, ಆತ್ಮಹತ್ಯೆ ಮಾಡಿಕೊಳ್ಳಲಿ ಅಂತ ಹೇಳಿದರು
ರಾಯಚೂರು: ರೈತರ ಆತ್ಮಹತ್ಯೆಯಂಥ ಅತ್ಯಂತ ಗಂಭೀರ ಮತ್ತು ಸಂವೇದ ಶೀಲ ವಿಷಯದ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಮತ್ತು ವಿಜಯಪುರದ ಒಬ್ಬ ಸಚಿವ ಹಗುರವಾಗಿ, ಉಡಾಫೆ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡುತ್ತಿರವುದು ಗಾಬರಿ ಹುಟ್ಟಿಸುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಹೇಳಿದರು. ವಿಜಯಪುರದ ಮಂತ್ರಿಯೊಬ್ಬ (ಮಂತ್ರಿಯ ಹೆಸರು ಹೇಳಲಿಲ್ಲ) ಆತ್ಮಹತ್ಯೆ ಮಾಡಿಕೊಂಡರೆ ಕುಟುಂಬಕ್ಕೆ ಸರ್ಕಾರದಿಂದ ರೂ. 5 ಲಕ್ಷ ಪರಿಹಾರ (compensation) ಸಿಗುತ್ತದೆ ಎಂಬ ಕಾರಣಕ್ಕೆ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ ಅಂತ ಹೇಳುತ್ತಾನೆ ಅಂತ ಯತ್ನಾಳ್ ಹೇಳಿದರು. ತೀರ ಹತಾಷ ಸ್ಥಿತಿ ತಲುಪಿದಾಗ, ಬದುಕಲು ಮಾರ್ಗೋಪಾಯವೇ ಕಾಣದಾದಾಗ ರೈತ ಸಾವಿಗೆ ಶರಣಾಗುತ್ತಾನೆ ದುಡ್ಡಿನಾಸೆಗಾಗಿ ಅಲ್ಲ ಎಂದ ಯತ್ನಾಳ್, ಆ ಮಂತ್ರಿಗೆ ತಾನು ರೂ. 5 ಕೋಟಿ ನೀಡುತ್ತ್ತೇನೆ, ಆತ್ಮಹತ್ಯೆ ಮಾಡಿಕೊಳ್ಳಲಿ ಅಂತ ಸವಾಲೆಸೆದರು. ಶಿವಕುಮಾರ್ ಸ್ಥಿತಿವಂತರಾಗಿರುವುದರಿಂದ ಅವರಿಗೆ ರೂ. 25 ಕೋಟಿ ನೀಡುತ್ತೇನೆ, ಆತ್ಮಹತ್ಯೆ ಮಾಡಿಕೊಳ್ಳಲಿ ಅಂತ ಹೇಳಿದರು. 135 ಸ್ಥಾನಗಳನ್ನು ಗೆದ್ದ ಕಾರಣ ಕಾಂಗ್ರೆಸ್ ನಾಯಕರಿಗೆ ಅಹಂಕಾರ ತಲೆಗೇರಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ