AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಡಿಯೂರಪ್ಪ ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ, ಪಕ್ಷದ ಹಿತದೃಷ್ಟಿಯಿಂದಲೇ ಮೈತ್ರಿ ಬಗ್ಗೆ ಯೋಚಿಸಿರುತ್ತಾರೆ: ಪ್ರತಾಪ ಸಿಂಹ, ಸಂಸದ

ಯಡಿಯೂರಪ್ಪ ರಾಜ್ಯ ಬಿಜೆಪಿಯ ಪ್ರಶ್ನಾತೀತ ನಾಯಕ, ಪಕ್ಷದ ಹಿತದೃಷ್ಟಿಯಿಂದಲೇ ಮೈತ್ರಿ ಬಗ್ಗೆ ಯೋಚಿಸಿರುತ್ತಾರೆ: ಪ್ರತಾಪ ಸಿಂಹ, ಸಂಸದ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 08, 2023 | 4:53 PM

2004ರಿಂದ ಈಚೆಗೆ ಅವರು ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಬಿಜೆಪಿಗೆ ಹೆಚ್ಚೆಚ್ಚು ಸ್ಥಾನ ನೀಡುತ್ತಾ ಬಂದಿದ್ದಾರೆ. 2004 ರಲ್ಲಿ 18, 2009ರಲ್ಲಿ 19, 2014 ರಲ್ಲಿ 17 ಮತ್ತು 2019ರಲ್ಲಿ 25 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ದೇಶಕ್ಕೆ ನರೇಂದ್ರ ಮೋದಿಯವರಂಥ ಒಬ್ಬ ಸಮರ್ಥ ಪ್ರಧಾನ ಮಂತ್ರಿಯ ಅವಶ್ಯಕತೆಯಿದೆ ಅಂತ ಗೊತ್ತಿರುವ ಕನ್ನಡಿಗರು ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಂಸದ ಪ್ರತಾಪ ಸಿಂಹ (Pratap Simha), ಬಿಎಸ್ ಯಡಿಯೂರಪ್ಪ (BS Yediyurappa ) ಕರ್ನಾಟಕದಲ್ಲಿ ಬಿಜೆಪಿಯ ಅತ್ಯುನ್ನತ ಶ್ರೇಣಿಯ ಪ್ರಶ್ನಾತೀತ ನಾಯಕರು. ರಾಜ್ಯದಲ್ಲಿ ಎರಡು ಬಾರಿ ಬಿಜೆಪಿಯನ್ನು ಅಧಿಕಾರಕ್ಕೆ ತಂದವರು. ಈ ಹಿನ್ನೆಲೆಯಲ್ಲಿ ಅವರು ಜೆಡಿಎಸ್ ಜೊತೆ ಮೈತ್ರಿ (alliance) ಮಾಡಿಕೊಳ್ಳುವ ಬಗ್ಗೆ ಯೋಚನೆ ಮಾಡಿದ್ದರೆ ಪಕ್ಷದ ಹಿತದೃಷ್ಟಿಯಿಂದಲೇ ಮಾಡಿರುತ್ತಾರೆ ಎಂದು ಹೇಳಿದರು. ಕೇಂದ್ರದ ವರಿಷ್ಠರೊಂದಿಗೆ ಚರ್ಚಿಸಿ ಯಡಿಯೂರಪ್ಪನವರು ಏನೇ ನಿರ್ಣಯ ತೆಗೆದುಕೊಂಡರೂ ಕಾರ್ಯಕರ್ತರಾದ ತಾವೆಲ್ಲ ಆದನ್ನು ಚಾಚೂ ತಪ್ಪದೆ ಪಾಲಿಸುತ್ತೇವೆ ಎಂದು ಸಂಸದ ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಕಾರದಲ್ಲಿದ್ದರೂ ನಮ್ಮ ರಾಜ್ಯದ ಮತದಾರರು ಪ್ರಜ್ಞಾವಂತರು. 2004ರಿಂದ ಈಚೆಗೆ ಅವರು ಲೋಕಸಭಾ ಚುನಾವಣೆಯಲ್ಲಿ ಸತತವಾಗಿ ಬಿಜೆಪಿಗೆ ಹೆಚ್ಚೆಚ್ಚು ಸ್ಥಾನ ನೀಡುತ್ತಾ ಬಂದಿದ್ದಾರೆ. 2004 ರಲ್ಲಿ 18, 2009ರಲ್ಲಿ 19, 2014 ರಲ್ಲಿ 17 ಮತ್ತು 2019ರಲ್ಲಿ 25 ಸ್ಥಾನಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ. ದೇಶಕ್ಕೆ ನರೇಂದ್ರ ಮೋದಿಯವರಂಥ ಒಬ್ಬ ಸಮರ್ಥ ಪ್ರಧಾನ ಮಂತ್ರಿಯ ಅವಶ್ಯಕತೆಯಿದೆ ಅಂತ ಗೊತ್ತಿರುವ ಕನ್ನಡಿಗರು ಲೋಕ ಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಲಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ