Chikmagalur Utsav: ಚಿಕ್ಕಮಗಳೂರು ಉತ್ಸವದಲ್ಲಿ ಈ ಬಾರಿ ಸಿಟಿ ರವಿ ಮತ್ತು ಅವರ ಧರ್ಮಪತ್ನಿ ಜೊತೆಯಾಗಿ ಕುಣಿದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 20, 2023 | 11:15 AM

ಕೆಲ ದಿನಗಳ ಹಿಂದೆ, ಚಿಕ್ಕಮಗಳೂರಿನ ಕ್ರೀಡಾ ಉತ್ಸವದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಪಲ್ಲವಿ ಅವರು ಆಗಲೂ ಪಾರಿತೋಷಕಗಳನ್ನು ಗೆದ್ದ ಕ್ರೀಡಾಪಟುಗಳೊಂದಿಗೆ ಡ್ಯಾನ್ಸ್ ಮಾಡಿದ್ದರು.

ಚಿಕ್ಕಮಗಳೂರು:  ಹಿರಿಯ ಬಿಜೆಪಿ ನಾಯಕ ಸಿಟಿ ರವಿ (CT Ravi) ಮತ್ತು ಅವರ ಪತ್ನಿ ಪಲ್ಲವಿ ರವಿ (Pallavi Ravi) ಅವರಿಗೆ ಡ್ಯಾನ್ಸ್ ನಲ್ಲಿ ಬಹಳ ಆಸಕ್ತಿಯಿರುವಂತಿದೆ ಮಾರಾಯ್ರೇ. ಈ ವಿಡಿಯೋವನ್ನು ನೋಡಿ. ರವಿ ಅವರು ಚಿಕ್ಕಮಗಳೂರು ಉತ್ಸವದಲ್ಲಿ ತಮ್ಮ ಬೆಂಬಲಿಗರು ಮತ್ತು ಅಭಿಮಾನಿಗಳೊಂದಿಗೆ ಕನ್ನಡದ ಖ್ಯಾತ ಹಿನ್ನೆಲೆ ಗಾಯಕ ರಾಜೇಶ್ ಕೃಷ್ಣನ್ (Rajesh Krishnan) ಅವರ ಜನಪ್ರಿಯ ಹಾಡೊಂದಕ್ಕೆ ತಾಳಬದ್ಧವಾಗಿ ಹೆಜ್ಜೆ ಹಾಕುತ್ತಿದ್ದಾರೆ. ಸ್ವಲ್ಪ ಸಮಯದ ನಂತರ ರವಿ ಪತ್ನಿ ಪಲ್ಲವಿ ಅವರ ಜೊತೆಗೂಡಿ ದಂಪತಿಗಳು ಅಲ್ಲಿರುವ ಜನರ ಸಂಭ್ರಮದಲ್ಲಿ ಬೆರೆತು ಕುಣಿಯತೊಡಗುತ್ತಾರೆ. ನಿಮಗೆ ನೆನಪಿರಬಹುದು, 2-3 ದಿನಗಳ ಹಿಂದೆ, ಚಿಕ್ಕಮಗಳೂರಿನ ಕ್ರೀಡಾ ಉತ್ಸವದ ಸಮಾರೋಪ ಸಮಾರಂಭಕ್ಕೆ ಆಗಮಿಸಿದ್ದ ಪಲ್ಲವಿ ಅವರು ಆಗಲೂ ಪಾರಿತೋಷಕಗಳನ್ನು ಗೆದ್ದ ಕ್ರೀಡಾಪಟುಗಳೊಂದಿಗೆ ಡ್ಯಾನ್ಸ್ ಮಾಡಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ