ಬಿಜೆಪಿ ಶಾಸಕ ಡಾ ಸಿಎನ್ ಅಶ್ವಥ್ ನಾರಾಯಣ ಮಾತುಗಳಲ್ಲಿ ಆತ್ಮವಿಶ್ವಾಸಕ್ಕಿಂತ ಹತಾಶೆ ಹೆಚ್ಚು ವ್ಯಕ್ತವಾಗುತ್ತಿದೆ!

|

Updated on: Aug 26, 2023 | 6:02 PM

ಕಾಂಗ್ರೆಸ್ ಪಕ್ಷದ ಶಾಸಕರಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಅತೃಪ್ತಿ, ಅಸಮಾಧಾನ ಹೊಗೆಯಾಡುತ್ತಿದೆ, ಭ್ರಷ್ಟಾಚಾರ ನಡೆಯುತ್ತಿದೆ ಅಂತ ಶಾಸಕರ ಜೊತೆ ಗುತ್ತಿಗೆದಾರರು ಸಹ ದೂರುತ್ತಿದ್ದಾರೆ, ಹಾಗಾಗಿ ಕಾಂಗ್ರೆಸ್ ಪಕ್ಷದಲ್ಲರುವವರು ಮುಳಗುವುದರ ಜೊತೆಗೆ ಅಲ್ಲಿಗೆ ಹೋಗುವವರು ಸಹ ಮುಳುಗುತ್ತಾರೆ ಎಂದು ಆಶ್ವಥ್ ನಾರಾಯಣ ಹೇಳಿದರು.

ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಅವರ ಮಾತುಗಳಲ್ಲಿ ಹತಾಶೆ ಸ್ಪಷ್ಟವಾಗಿ ಕಾಣುತ್ತಿದೆ. ಇಂದು ತಮ್ಮ ಕ್ಷೇತ್ರದ ಮಲ್ಲೇಶ್ವರಂ ಕ್ರೀಡಾ ಪ್ರತಿಷ್ಠಾನದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರಿಗೆ ಆಪರೇಶನ್ ಹಸ್ತ (Operation Hastha) ಬಗ್ಗೆ ಕೇಳಿದಾಗ, ಅದನ್ನು ಕಾಂಗ್ರೆಸ್ ನಾಯಕರು (Congress leaders) ನಡೆಸುತ್ತಿದ್ದಾರೋ ಇಲ್ಲವೋ ಗೊತ್ತಿಲ್ಲ, ಹೋಗುವ ಮತ್ತು ಬರುವ ನಾಯಕರನ್ನು ತಡೆಯೋದಿಕ್ಕಾಗಲ್ಲ ಎಂದರು. ಮುಂದುವರಿದು ಮಾತಾಡಿದ ಆವರು, ಕಾಂಗ್ರೆಸ್ ಪಕ್ಷವೇ ಒಂದು ಮುಳುಗುತ್ತಿರುವ ದೋಣಿಯಾಗಿದೆ. ಪಕ್ಷದ ಶಾಸಕರಲ್ಲಿ ತಮ್ಮದೇ ಸರ್ಕಾರದ ವಿರುದ್ಧ ಅತೃಪ್ತಿ, ಅಸಮಾಧಾನ ಹೊಗೆಯಾಡುತ್ತಿದೆ, ಭ್ರಷ್ಟಾಚಾರ ನಡೆಯುತ್ತಿದೆ ಅಂತ ಶಾಸಕರ ಜೊತೆ ಗುತ್ತಿಗೆದಾರರು ಸಹ ದೂರುತ್ತಿದ್ದಾರೆ, ಹಾಗಾಗಿ ಕಾಂಗ್ರೆಸ್ ಪಕ್ಷದಲ್ಲರುವವರು ಮುಳಗುವುದರ ಜೊತೆಗೆ ಅಲ್ಲಿಗೆ ಹೋಗುವವರು ಸಹ ಮುಳುಗುತ್ತಾರೆ ಎಂದು ಆಶ್ವಥ್ ನಾರಾಯಣ ಹೇಳಿದರು. ಕೊನೆಯಲ್ಲಿ ಅವರು ಬಿಜೆಪಿಯಲ್ಲಿರುವ ಯಾವುದೇ ಕಾಂಗ್ರೆಸ್ ಪಕ್ಷ ಸೇರುವುದಿಲ್ಲ ಅಂತ ಹೇಳುತ್ತಾ ಹುಸಿ ಆತ್ಮವಿಶ್ವಾಸ ವ್ಯಕ್ತಪಡಿಸುವ ಪ್ರಯತ್ನ ಮಾಡುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ