AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆ ಶಿವಕುಮಾರ್ ಶ್ರೀಮಂತಿಕೆ ರಹಸ್ಯ ಪ್ರಶ್ನಿಸಿದ ಡಾ ಸಿಎನ್ ಅಶ್ವಥ್ ನಾರಾಯಣ ಗುಟ್ಟನ್ನು ಕನ್ನಡಿಗರೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಿದರು!

ಡಿಕೆ ಶಿವಕುಮಾರ್ ಶ್ರೀಮಂತಿಕೆ ರಹಸ್ಯ ಪ್ರಶ್ನಿಸಿದ ಡಾ ಸಿಎನ್ ಅಶ್ವಥ್ ನಾರಾಯಣ ಗುಟ್ಟನ್ನು ಕನ್ನಡಿಗರೊಂದಿಗೆ ಹಂಚಿಕೊಳ್ಳುವಂತೆ ಮನವಿ ಮಾಡಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 14, 2023 | 5:19 PM

Share

ಶಿವಕುಮಾರ್ ರಾಷ್ಟ್ರದ ನಂಬರ್ ವನ್ ಕೃಷಿಕ ಅನಿಸಿಕೊಂಡಿದ್ದಾರೆ, ಅವರು ಭತ್ತ ನಾಟಿ ಮಾಡಿದರೆ ಬಂಗಾರದ ಅಕ್ಕಿ ಸಿಗುತ್ತದೆ, ರಾಗಿ ಬಿತ್ತಿದರೆ ಚಿನ್ನದ ರಾಗಿ ಬೆಳೆಯುತ್ತದೆ, ಹಾಗೆಯೇ, ಕಬ್ಬು ನಾಟಿ ಹೊನ್ನಿನ ಕಬ್ಬು ತೆಗೆಯುತ್ತಾರೆ ಎಂದು ನಗುತ್ತಾ ಅಶ್ವಥ್ ನಾರಾಯಣ ಹೇಳಿದಾಗ, ಅವರ ಬಲಭಾಗದಲ್ಲಿದ್ದ ಆರ್ ಅಶೋಕ ಮತ್ತು ಎಡಕ್ಕಿದ್ದ ಎನ್ ರವಿಕುಮಾರ್ ಕೂಡ ನಗುತ್ತಿದ್ದರು.

ಬೆಂಗಳೂರು: ಬಿಜೆಪಿ ನಾಯಕ ಡಾ ಸಿಎನ್ ಅಶ್ವಥ್ ನಾರಾಯಣ (Dr CN Ashwath Narayan) ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ನಡುವೆ ವಾಕ್ಸಮರ ಜಾರಿಯಲ್ಲಿದೆ ಮಾರಾಯ್ರೇ. ಸ್ವಾತಂತ್ರ್ಯೋತ್ಸವ ಮುನ್ನಾ (eve of Independence Day) ದಿನವಾದ ಇಂದು ಬಿಜೆಪಿ ನಾಯಕರು ಸುದ್ದಿಗೋಷ್ಟಿಯೊಂದನ್ನು ನಡೆಸಿದರು. ಈ ಸಂದರ್ಭದಲ್ಲಿ ಅಶ್ವಥ್ ನಾರಾಯಣ, ಶಿವಕಮಾರ ಶ್ರೀಮಂತಿಕೆಯನ್ನು ಲೇವಡಿ ಮಾಡುತ್ತಾ ಮಾತಾಡಿದರು. ನಗುತ್ತಲೇ ಶಿವಕುಮಾರ್ ರನ್ನು ತಿವಿದ ಬಿಜೆಪಿ ಶಾಸಕ, ಉಪ ಮುಖ್ಯಮಂತ್ರಿ ಹೇಗೆ ದಿಢೀರ್ ಅಗಿ ಶ್ರೀಮಂತರಾದರು, ಅವರ ಶ್ರೀಮಂತಿಕೆಯ ಗುಟ್ಟೇನು, ರಾಜ್ಯದಲ್ಲಿ ಅವರೊಬ್ಬರೇ ಶ್ರೀಮಂತರಾದರೆ ಹೇಗೆ? ಹಣ ಗಳಿಸುವ ಸೀಕ್ರೆಟ್ ಅವರು ಎಲ್ಲರಿಗೂ ಹೇಳಿಕೊಡಲಿ ಅಂತ ಅಶ್ವಥ್ ನಾರಾಯಣ ಹೇಳಿದರು. ಮುಂದುವರಿದು ಮಾತಾಡಿದ ಅವರು, ಶಿವಕುಮಾರ್ ರಾಷ್ಟ್ರದ ನಂಬರ್ ವನ್ ಕೃಷಿಕ ಅನಿಸಿಕೊಂಡಿದ್ದಾರೆ, ಅವರು ಭತ್ತ ನಾಟಿ ಮಾಡಿದರೆ ಬಂಗಾರದ ಅಕ್ಕಿ ಸಿಗುತ್ತದೆ, ರಾಗಿ ಬಿತ್ತಿದರೆ ಚಿನ್ನದ ರಾಗಿ ಬೆಳೆಯುತ್ತದೆ, ಹಾಗೆಯೇ, ಕಬ್ಬು ನಾಟಿ ಹೊನ್ನಿನ ಕಬ್ಬು ತೆಗೆಯುತ್ತಾರೆ ಎಂದು ನಗುತ್ತಾ ಹೇಳಿದಾಗ, ಅವರ ಬಲಭಾಗದಲ್ಲಿದ್ದ ಆರ್ ಅಶೋಕ ಮತ್ತು ಎಡಕ್ಕಿದ್ದ ಎನ್ ರವಿಕುಮಾರ್ ಕೂಡ ನಗುತ್ತಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ