ವಿರೋಧಪಕ್ಷದ ನಾಯಕರಾಗಿದ್ದಾಗಲೂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ನಾಯಕರಿಂದ ಈಗಿನಷ್ಟೇ ಗೌರವ ಗಿಟ್ಟಿಸುತ್ತಿದ್ದರು!

ವಿರೋಧಪಕ್ಷದ ನಾಯಕರಾಗಿದ್ದಾಗಲೂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ನಾಯಕರಿಂದ ಈಗಿನಷ್ಟೇ ಗೌರವ ಗಿಟ್ಟಿಸುತ್ತಿದ್ದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 14, 2023 | 2:23 PM

ವೇದಿಕೆ ಮೇಲೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಹಿರಿಯ ನಾಯಕ ಮತ್ತು ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಮತ್ತು ಸಿದ್ದರಾಮಯ್ಯ ಸಂಪುಟದ ಸಚಿವರು ಮತ್ತು ಶಾಸಕರಿದ್ದಾರೆ. ಹಿಂದಿನ ಸಾಲಿನಲ್ಲೂ ಹಲವು ಮಂತ್ರಿ ಮತ್ತು ಶಾಸಕರು ಕುಳಿತಿದ್ದಾರೆ.

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಗತ್ತು ಮತ್ತು ಠೀವಿಯ ಬಗ್ಗೆ ನಾವು ಆಗಾಗ ಚರ್ಚಿಸುತ್ತಿರುತ್ತೇವೆ. ಅವರು ಮುಖ್ಯಮಂತ್ರಿಯಾಗಿರುವ ಕಾರಣ ಹೀಗೆ ಅಂತ ಭಾವಿಸಿದರೆ ತಪ್ಪಾಗುತ್ತದೆ. ಯಾಕೆಂದರೆ, ವಿರೋಧ ಪಕ್ಷದ ನಾಯಕನಾಗಿದ್ದಾಗ (Leader of Opposition) ಅಥವಾ ಸಚಿವ-ಶಾಸಕನಾಗಿದ್ದಾಗಲೂ ಅವರಲ್ಲಿ ಇದೇ ಥರಹ ಗತ್ತು ಕಾಣಿಸುತಿತ್ತು. ಇದು ಇಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ (KPCC office) ನಡೆದ ಸಭೆಯಲ್ಲಿ ಭಾಗವಹಿಸಲು ಮುಖ್ಯಮಂತ್ರಿ ಆಗಮಿಸಿದಾಗಿನ ದೃಶ್ಯಾವಳಿ. ಅವರು ವೇದಿಕೆಗೆ ಆಗಮಿಸಿದಾಗ ಅಲ್ಲಿದ್ದ ಹಿರಿಯ ನಾಯಕರು, ಮಂತ್ರಿಗಳು, ಶಾಸಕರಿ ಗೌರವಸೂಚಕವಾಗಿ ಎದ್ದು ನಿಲ್ಲುತ್ತಾರೆ. ಅದು ಬಿಡಿ ಶಿಷ್ಟಾಚಾರ. ಆದರೆ, ಆಗಲೇ ಹೇಳಿದಂತೆ ಸಿದ್ದರಾಮಯ್ಯ ಕೇವಲ ಶಾಸಕರಾಗಿಯೂ ಪಕ್ಷದ ನಾಯಕರಿಂದ ಇಂಥ ಗೌರವ ಪಡೆದುಕೊಳ್ಳುತ್ತಾರೆ. ವೇದಿಕೆ ಮೇಲೆ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಹಿರಿಯ ನಾಯಕ ಮತ್ತು ಮಾಜಿ ಸಂಸದ ಇಕ್ಬಾಲ್ ಅಹ್ಮದ್ ಸರಡಗಿ ಮತ್ತು ಸಿದ್ದರಾಮಯ್ಯ ಸಂಪುಟದ ಸಚಿವರು ಮತ್ತು ಶಾಸಕರಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ