ಶಿವಮೊಗ್ಗ: 30 ಅಡಿ ಬಾವಿಗೆ ಬಿದ್ದ ಮಹಿಳೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ; ವಿಡಿಯೋ ಇಲ್ಲಿದೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನ ಕೊಪ್ಪದಲ್ಲಿ ಆಕಸ್ಮಿಕವಾಗಿ 30 ಅಡಿ ಬಾವಿಗೆ ಬಿದ್ದ ಮಹಿಳೆಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ನಡೆದಿದೆ. ಮಾನಸಿಕವಾಗಿ ದುರ್ಬಲರಾಗಿದ್ದ ಯಶೋದಮ್ಮ(60) ಬಾವಿಗೆ ಬಿದ್ದ ಮಹಿಳೆ.
ಶಿವಮೊಗ್ಗ, ಆ.26: ಆಕಸ್ಮಿಕವಾಗಿ 30 ಅಡಿ ಬಾವಿಗೆ ಬಿದ್ದ ಮಹಿಳೆಯನ್ನು ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನ ಕೊಪ್ಪದಲ್ಲಿ ನಡೆದಿದೆ. ಮಾವಿನಕೊಪ್ಪದ ನಿವಾಸಿಯಾದ ಯಶೋದಮ್ಮ (60) ಬಾವಿಗೆ ಬಿದ್ದ ಮಹಿಳೆ. ಮಾನಸಿಕವಾಗಿ ದುರ್ಬಲರಾಗಿದ್ದ ಯಶೋದಮ್ಮ, ತಮ್ಮ ಮನೆಯ ಹಿಂದಿನ ಬಾವಿಗೆ ಬಿದ್ದಿದ್ದಾರೆ.
ಅತ್ತೆ ಕಾಣದಿದ್ದಾಗ ಮನೆ ಸುತ್ತಮುತ್ತ ಹುಡುಕಾಟ ನಡೆಸಿದ ಸೊಸೆ
ಇನ್ನು ಮನೆಯಲ್ಲಿ ಅತ್ತೆ ಕಾಣದಿದ್ದಾಗ ಸೊಸೆ ಮನೆಯ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಬಳಿಕ ಮನೆ ಹಿಂಭಾಗದ ಬಾವಿಗೆ ಮುಚ್ಚಿದ ಕಬ್ಬಿಣದ ಗ್ರಿಲ್ ತೆರೆದಿದ್ದನ್ನು ಕಂಡ ಸೊಸೆ. ಅನುಮಾನದಿಂದ ಬಾವಿಯಲ್ಲಿ ನೋಡಿದ್ದಾರೆ. ಅತ್ತೆ ಯಶೋದಮ್ಮ ಭಾವಿಯೊಳಗೆ ಬಿದ್ದಿರುವುದು ಪತ್ತೆಯಾಗಿದ್ದು, ವೃದ್ದೆ ಬಾವಿಯಲ್ಲಿ ಪೈಪ್ ಹಿಡಿದು ನಿಂತಿದ್ದಾರೆ. ತಕ್ಷಣ ಗ್ರಾಮಸ್ಥರು ಅಗ್ನಿಶಾಮಕದಳಕ್ಕೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಯವರು ವೃದ್ದೆಯನ್ನು ರಕ್ಷಣೆ ಮಾಡಿದ್ದಾರೆ.‘
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos