ಲೋಕಾಯುಕ್ತ ಕಾರ್ಯಚರಣೆ ವೇಳೆ ಪ್ರಶಾಂತ್ ನೌಟಂಕಿ, ನುಂಗಿದ್ದ ಮಹತ್ವದ ಚೀಟಿಯನ್ನು ಕಕ್ಕಿಸಿದ ಅಧಿಕಾರಿಗಳು
ಪ್ರಶಾಂತ್ ಕೆಲ ಬಹುಮುಖ್ಯ ದಾಖಲೆಗಳನ್ನು ನುಂಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಬಳಿಕ ಲೋಕಾಯುಕ್ತ ಅಧಿಕಾರಿಗಳು ವಾಂತಿ ಮಾಡಿಸುವ ಮೂಲಕ ಮಹತ್ವದ ದಾಖಲೆಗಳನ್ನು ಕಕ್ಕಿಸಿದ್ದಾರೆ.
ಬೆಂಗಳೂರು: ಚೆನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಪುತ್ರ ಪ್ರಶಾಂತ್ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ಮಾಡಿದ್ದು,7.62 ಕೋಟಿ ರೂ ನಗದು ಹಣ ಹಾಗೂ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಗಳೂರಿನ ಸಂಜಯ್ ನಗರದ ಕೆಎಂವಿ ಮ್ಯಾನ್ಷನ್ ಅಪಾರ್ಟ್ ಮೆಂಟ್ ನಲ್ಲಿರುವ ನಿವಾಸದಲ್ಲಿ ನಿನ್ನೆ ಸಂಜೆಯಿಂದಲೇ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಕ್ರಸೆಂಟ್ ರಸ್ತೆಯಲ್ಲಿ ಕಚೇರಿ ಮೇಲೂ ದಾಳಿ ಮಾಡಿದ್ದು, ಈ ವೇಳೆ ಪ್ರಶಾಂತ್ ಕೆಲ ಬಹುಮುಖ್ಯ ದಾಖಲೆಗಳನ್ನು ನುಂಗಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಬಳಿಕ ಲೋಕಾಯುಕ್ತ ಅಧಿಕಾರಿಗಳು ವಾಂತಿ ಮಾಡಿಸುವ ಮೂಲಕ ಮಹತ್ವದ ದಾಖಲೆಗಳನ್ನು ಕಕ್ಕಿಸಿದ್ದಾರೆ.
Published on: Mar 03, 2023 01:01 PM