ಡಿಕೆ ಶಿವಕುಮಾರ್ 40 ಶಾಸಕರೊಂದಿಗೆ ಬಿಜೆಪಿ ಸೇರಲು ಸಿದ್ದರಾಗಿದ್ದಾರೆಂದು ಮುನಿರತ್ನ ನಾಯ್ಡು ಹೇಳುತ್ತಾರೆ!

|

Updated on: Mar 23, 2024 | 2:22 PM

ಯಾಕೆ ಅಂತ ಮಾಧ್ಯಮದವರು ಕೇಳಿದರೆ ಉತ್ತರಿಸಲು ತಡಬಡಿಸುತ್ತಾರೆ. ನಂತರ ಸಾವರಿಸಿಕೊಂಡು ನಾಲ್ಕು ಮುಖ್ಯಮಂತ್ರಿಗಳು ಬೇಕೆಂದು ಕಾಂಗ್ರೆಸ್ ಶಾಸಕರು ಅಗ್ರಹಿಸುತ್ತಿರುವ ಕಾರಣ ಅವರು 40 ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ ಎಂದು ಶಾಸಕ ಹೇಳುತ್ತಾರೆ. ಶಿವಕುಮಾರ್ ಬಿಜೆಪಿ ಸೇರುವುದಾಗಿದ್ದರೆ 4-5 ವರ್ಷಗಳ ಹಿಂದೆಯೇ ಆ ಕೆಲಸ ಮಾಡಿರುತ್ತಿದ್ದರು.

ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (Munirathna Naidu) ಕೆಲವು ಸಲ ಅತಿಶಯೋಕ್ತಿಯ ಹೇಳಿಕೆ ನೀಡಿಬಿಡುತ್ತಾರೆ. ಇವತ್ತು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಡಿಕೆ ಶಿವಕುಮಾರ್ (DK Shivakumar) ತಮ್ಮ ಬಣದ ನಲ್ವತ್ತು ಶಾಸಕರೊಂದಿಗೆ ಬಿಜೆಪಿಗೆ ಬರಲು (willing to join BJP) ತುದಿಗಾಲಲ್ಲಿ ನಿಂತಿದ್ದಾರಂತೆ. ಬಾಗಿಲು ತೆರೆದರೆ ಒಳಗೆ ನುಗ್ಗಬಿಡುತ್ತಾರಂತೆ. ಬಿಜೆಪಿ ನಾಯಕರು ಬೇಕೆಂದೇ ಬಾಗಿಲು ತೆರೆಯುತ್ತಿಲ್ಲ ಎಂದು ಮುನಿರತ್ನ ಹೇಳುತ್ತಾರೆ. ಯಾಕೆ ಅಂತ ಮಾಧ್ಯಮದವರು ಕೇಳಿದರೆ ಉತ್ತರಿಸಲು ತಡಬಡಿಸುತ್ತಾರೆ. ನಂತರ ಸಾವರಿಸಿಕೊಂಡು ನಾಲ್ಕು ಮುಖ್ಯಮಂತ್ರಿಗಳು ಬೇಕೆಂದು ಕಾಂಗ್ರೆಸ್ ಶಾಸಕರು ಅಗ್ರಹಿಸುತ್ತಿರುವ ಕಾರಣ ಅವರು 40 ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ ಎಂದು ಶಾಸಕ ಹೇಳುತ್ತಾರೆ. ಶಿವಕುಮಾರ್ ಬಿಜೆಪಿ ಸೇರುವುದಾಗಿದ್ದರೆ 4-5 ವರ್ಷಗಳ ಹಿಂದೆಯೇ ಆ ಕೆಲಸ ಮಾಡಿರುತ್ತಿದ್ದರು. ಅದರೆ ತನ್ನ ಮೇಲೆ ಎಷ್ಟೇ ಒತ್ತಡವಿದ್ದರೂ ಅವರು ಕಾಂಗ್ರೆಸ್ ತೊರೆಯುವ ಮನಸ್ಸು ಮಾಡಲಿಲ್ಲ. ಮುನಿರತ್ನ ಯಾವ ಹಿನ್ನೆಲೆಯಲ್ಲಿ ಈ ಮಾತನ್ನು ಹೇಳಿದರೆಂದು ಕನ್ನಡಿಗರಿಗಂತೂ ಅರ್ಥವಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾಜ್ಯ ಸರ್ಕಾರ ನೀಡುತ್ತಿರುವ ಪ್ರತಿ ಅಕ್ಕಿಕಾಳಿನ ಮೇಲೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿದೆ: ಮುನಿರತ್ನ ನಾಯ್ಡು

Follow us on