ನುಡಿದಂತೆ ನಡೆದ ಮುನಿರತ್ನ; ಅನುದಾನ ಬಿಡುಗಡೆ ಮಾಡುವಂತೆ ಸಾರ್ವಜನಿಕವಾಗಿ ಡಿಕೆ ಶಿವಕುಮಾರ್ ಕಾಲಿಗೆ ಬಿದ್ದು ಮನವಿ ಮಾಡಿದರು!

ನುಡಿದಂತೆ ನಡೆದ ಮುನಿರತ್ನ; ಅನುದಾನ ಬಿಡುಗಡೆ ಮಾಡುವಂತೆ ಸಾರ್ವಜನಿಕವಾಗಿ ಡಿಕೆ ಶಿವಕುಮಾರ್ ಕಾಲಿಗೆ ಬಿದ್ದು ಮನವಿ ಮಾಡಿದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Oct 11, 2023 | 3:08 PM

ಶಿವಕುಮಾರ್ ಇದಕ್ಕೆಲ್ಲ ಅವಕಾಶ ಕೊಡಬಾರದಿತ್ತು ಅನಿಸುತ್ತದೆ. ಯಾಕೆಂದರೆ ಇದು ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗಬಹುದಾದ ವಿಷಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ, ಹೋರಾಟ ನಡೆಯುತ್ತಿರಬೇಕು, ಮುನಿರತ್ನ ಅವರು ಮನವಿ ಸ್ವೀಕರಿಸಿದ್ದೇನೆ ಅಂತ ಹೇಳಿ ಆ ಕ್ಷಣದ ಮಟ್ಟಿಗೆ ಶಿವಕುಮಾರ್ ಮುಖವುಳಿಸಿಕೊಂಡರು. ವಿಷಯ ಅವರು ತಿಳಿದುಕೊಂಡಷ್ಟು ಸುಲಭವಾಗಿಲ್ಲ!

ಬೆಂಗಳೂರು: ಆಡಿದ್ದನ್ನು ಮಾಡಿ ತೋರಿಸಿದ್ದಾರೆ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (Munirathna Naidu)! ನಿನ್ನೆ ಪತ್ರಿಕಾ ಗೋಷ್ಟಿಯೊಂದನ್ನು ನಡೆಸಿ ಮಾತಾಡಿದ್ದ ಮುನಿರತ್ನ, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ಅನುದಾನವನ್ನು ತಡೆಹಿಡಿಯಲಾಗಿದೆ ಅದನ್ನು ಬಿಡುಗಡೆ ಮಾಡಬೇಕೆಂದು ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಡಿಕೆ ಶಿವಕುಮಾರ್ (DK Shivakumar) ಅವರ ಕಾಲಿಗೆ ಬಿದ್ದು ಬೇಡಿಕೊಳ್ಳುವುದಾಗಿ ಹೇಳಿದ್ದರು. ಇಂದು ವಿಧಾನ ಸೌಧ ಆವರಣದಲ್ಲಿ ಗಾಂಧಿ ಪ್ರತಿಮೆ ಕುಳಿತು ಪ್ರತಿಭಟನೆ ನಡೆಸಿದ ಮುನಿರತ್ನ ನಂತರ ಅರಮನೆ ಮೈದಾನದಲ್ಲಿ (palace grounds) ಕಂಬಳ ಕ್ರೀಡೆ ಆಯೋಜನೆಗೆ ನಡೆದ ಭೂಮಿ ಪೂಜೆಯಲ್ಲಿ ಪಾಲ್ಗೊಂಡಿದ್ದ ಶಿವಕುಮಾರ್ ರನ್ನು ಕಾಣಲು ಹೋದರು. ಉಪ ಮುಖ್ಯಮಂತ್ರಿ ಕಂಡೊಡನೆ ಎರಡೂ ಕೈ ಜೋಡಿಸಿ ನಮಸ್ಕರಿಸಿದ ಮುನಿರತ್ನ ಎಲ್ಲರೆದುರೇ ಅವರ ಕಾಲಿಗೆ ನಮಸ್ಕರಿಸಿದರು. ಶಿವಕುಮಾರ್ ರನ್ನು ಇಕ್ಕಟ್ಟಿನಲ್ಲಿ ಸಿಕ್ಕಿಸಬಹುದಾದ ಸನ್ನಿವೇಶ ಇದು. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಇದನ್ನು ದೊಡ್ಡ ಇಶ್ಸ್ಯೂ ಮಾಡಲಿದ್ದಾರೆ-ಅನುದಾನ ಬೇಕಿದ್ದರೆ ಡಿಸಿಎಂ ಕಾಲಿಗೆ ಬೀಳಬೇಕು!

ಶಿವಕುಮಾರ್ ಇದಕ್ಕೆಲ್ಲ ಅವಕಾಶ ಕೊಡಬಾರದಿತ್ತು ಅನಿಸುತ್ತದೆ. ಯಾಕೆಂದರೆ ಇದು ರಾಷ್ಟ್ರಮಟ್ಟದಲ್ಲೂ ಚರ್ಚೆಯಾಗಬಹುದಾದ ವಿಷಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ, ಹೋರಾಟ ನಡೆಯುತ್ತಿರಬೇಕು, ಮುನಿರತ್ನ ಅವರು ಮನವಿ ಸ್ವೀಕರಿಸಿದ್ದೇನೆ ಅಂತ ಹೇಳಿ ಆ ಕ್ಷಣದ ಮಟ್ಟಿಗೆ ಶಿವಕುಮಾರ್ ಮುಖವುಳಿಸಿಕೊಂಡರು. ವಿಷಯ ಅವರು ತಿಳಿದುಕೊಂಡಷ್ಟು ಸುಲಭವಾಗಿಲ್ಲ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ