ಅನುದಾನಕ್ಕಾಗಿ ಮುನಿರತ್ನಗೆ ಡಿಸಿಎಂ ಶಿವಕುಮಾರ್ ಕಾಲುಹಿಡಿಯುವ ಅನಿವಾರ್ಯತೆ ಉಂಟಾಗಿದೆಯೇ?
ಕ್ಷೇತ್ರದ ಅಭಿವೃದ್ಧಿ ಅನುದಾನ ಕೇಳಿಕೊಂಡು ಸಿದ್ದರಾಮಯ್ಯ ಬಳಿ ಹೋಗಲ್ಲ, ಶಿವಕುಮಾರ್ ಬಳಿ ಹೋಗುವುದಾಗಿ ಮುನಿರತ್ನ ಹೇಳಿದರು. ಬೆಂಗಳೂರು ಅಭಿವೃದ್ಧಿ ಸಚಿವ ಶಿವಕುಮಾರ್ ಆಗಿರುವುದರಿಂದ ಅವರ ಮತ್ತು ಸುರೇಶ್ ಅವರಿದ್ದಲ್ಲಿಗೆ ಹೋಗಿ ಇಬ್ಬರ ಕಾಲು ಹಿಡಿದು ಅನುದಾನ ಕೇಳುವುದಾಗಿ ಅವರು ಹೇಳಿದರು. ಅವರು ಕೊಟ್ಟರೆ ಸರಿ ಇಲ್ಲದಿದ್ದರೆ ತಮ್ಮ ಮತದಾರನ ಬಳಿ ಹೋಗಿ ಕಾಲು ಹಿಡಿದು ಬೇಡಿದರೂ ಅನುದಾನ ಸಿಕ್ಕಿಲ್ಲ ಅಂತ ಕೈ ಚೆಲ್ಲುವುದಾಗಿ ಮುನಿರತ್ನ ಹೇಳಿದರು.
ಬೆಂಗಳೂರು: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ವಿಷಯದಲ್ಲ್ಲಿ ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ನಾಯ್ಡು (Munirathna Naidu) ವರಸೆ ಬದಲಾಗಿದೆ ಮಾರಾಯ್ರೇ. ಇಂದು ತಮ್ಮ ಕಚೇರಿಯಲ್ಲಿ ಪತ್ರಿಕಾ ಗೋಷ್ಟಿ ನಡೆಸಿ ಮಾತಾಡಿದ ಮುನಿರತ್ನ ಶಿವಕುಮಾರ್ ಮತ್ತು ಡಿಕೆ ಸುರೇಶ್ (DK Suresh) ಬಗ್ಗೆ ಬಹಳ ಸಾಫ್ಟಾಗಿ ಮಾತಾಡಿದರು. ಶಿವಕುಮಾರ್ ಅವರನ್ನು ಪುನಃ ಜೈಲಿಗೆ ಹೋಗುತ್ತಾರಂತಲ್ಲ ಅಂತ ಕೇಳಿದ ಪ್ರಶ್ನೆಗೆ ಅವರು, ಅದರ ಬಗ್ಗೆ ಮಾಹಿತಿ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಅವರ ಬಳಿ ಮಾತ್ರ ಇರಬಹದು ಅವರನ್ನೇ ಕೇಳಿ ಅನ್ನುತ್ತಾರೆ. ಕ್ಷೇತ್ರದ ಅಭಿವೃದ್ಧಿ ಅನುದಾನ ಕೇಳಿಕೊಂಡು ಸಿದ್ದರಾಮಯ್ಯ ಬಳಿ ಹೋಗಲ್ಲ, ಶಿವಕುಮಾರ್ ಬಳಿ ಹೋಗುವುದಾಗಿ ಮುನಿರತ್ನ ಹೇಳಿದರು. ಬೆಂಗಳೂರು ಅಭಿವೃದ್ಧಿ ಸಚಿವ ಶಿವಕುಮಾರ್ ಆಗಿರುವುದರಿಂದ ಅವರ ಮತ್ತು ಸುರೇಶ್ ಅವರಿದ್ದಲ್ಲಿಗೆ ಹೋಗಿ ಇಬ್ಬರ ಕಾಲು ಹಿಡಿದು ಅನುದಾನ ಕೇಳುವುದಾಗಿ ಅವರು ಹೇಳಿದರು. ಅವರು ಕೊಟ್ಟರೆ ಸರಿ ಇಲ್ಲದಿದ್ದರೆ ತಮ್ಮ ಮತದಾರನ ಬಳಿ ಹೋಗಿ ಕಾಲು ಹಿಡಿದು ಬೇಡಿದರೂ ಅನುದಾನ ಸಿಕ್ಕಿಲ್ಲ ಅಂತ ಕೈ ಚೆಲ್ಲುವುದಾಗಿ ಮುನಿರತ್ನ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ