ವಿಡಿಯೋ ನೋಡಿ: ರೈಲ್ವೆ ಸೇತುವೆ ಕೆಳಗೆ ಸಿಕ್ಕಿಹಾಕಿಕೊಂಡ ಬೃಹತ್​ ಸರಕು ಸಾಗಣೆ ಲಾರಿ, ಅದನ್ನು ಕದಲಿಸಲು 2 ಗಂಟೆ ಹರಸಾಹಸ ಪಡಬೇಕಾಯ್ತು!

ವಿಡಿಯೋ ನೋಡಿ: ರೈಲ್ವೆ ಸೇತುವೆ ಕೆಳಗೆ ಸಿಕ್ಕಿಹಾಕಿಕೊಂಡ ಬೃಹತ್​ ಸರಕು ಸಾಗಣೆ ಲಾರಿ, ಅದನ್ನು ಕದಲಿಸಲು 2 ಗಂಟೆ ಹರಸಾಹಸ ಪಡಬೇಕಾಯ್ತು!

ಸಾಧು ಶ್ರೀನಾಥ್​
|

Updated on: Oct 10, 2023 | 6:24 PM

ಅದು ಚೆನ್ನೈ ಮತ್ತು ವಿಜಯವಾಡಕ್ಕೆ ಹೋಗುವ ಪ್ರಮುಖ ರೈಲು ಮಾರ್ಗವಾಗಿರುವುದರಿಂದ ಅದರ ಕೆಳಗೆ ಭಾರಿ ಹೊತ್ತು ಲಾರಿಯೊಂದು ಹಳಿಯಡಿ ಸಿಲುಕಿಕೊಂಡಿದ್ದಕ್ಕೆ ಪೊಲೀಸ್​​ ಅಧಿಕಾರಿಗಳು ಪೇಚಿಗೆ ಬಿದ್ದರು. ಇನ್ನೊಂದೆಡೆ ಮುಖ್ಯಮಂತ್ರಿ ನಿವಾಸಕ್ಕೆ ತೆರಳುವ ರಸ್ತೆ ಮಾರ್ಗವೂ ಅದಾಗಿರುವುದರಿಂದ ಪರಿಸ್ಥಿತಿ ಇನ್ನಷ್ಟು ಅಯೋಮಯವಾಗಿತ್ತು. ಕೊನೆಗೆ ಲಾರಿ ಹೊರತೆಗೆಯಲು ದೊಡ್ಡ ಕ್ರೇನ್ ತರಲಾಯಿತು.

ಗುಂಟೂರು, ಅಕ್ಟೋಬರ್ 10: ತಾಡೆಪಲ್ಲಿಯಿಂದ ರಾಷ್ಟ್ರೀಯ ಹೆದ್ದಾರಿಗೆ ಹೋಗುವ ರಸ್ತೆ ಅದು. ಚಿಕ್ಕ ಆಟೊಗಳು, ಬಸ್‌ಗಳು, ಮಿನಿ ವ್ಯಾನ್‌ಗಳು ರಸ್ತೆಯಲ್ಲಿ ಸರಾಗವಾಗಿ ಸಂಚರಿಸುತ್ತಿರುತ್ತವೆ. ಆ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸುವುದನ್ನು ಸ್ಥಳೀಯರು ಯಾವತ್ತಿಗೂ ನೋಡಿಲ್ಲ. ಏಕೆಂದರೆ ಅಲ್ಲಿ ರೈಲ್ವೆ ಕೆಳಸೇತುವೆ ಇದೆ. ಇದರಿಂದಾಗಿ ಆ ಮಾರ್ಗದಲ್ಲಿ ಭಾರೀ ವಾಹನಗಳು ಸಂಚರಿಸುವುದಿಲ್ಲ. ಆದರೆ ಮಂಗಳವಾರ ಮಧ್ಯಾಹ್ನ ಭಾರಿ ಲೋಡ್​​ನೊಂದಿಗೆ ಲಾರಿಯೊಂದು ಬಂದಿತ್ತು. ಲಾರಿಯಲ್ಲಿ ರಸಗೊಬ್ಬರ ಚೀಲಗಳಿದ್ದವು. ಲಾರಿ ಚಾಲಕ ಅಂಡರ್‌ಪಾಸ್‌ ಮೂಲಕ ಲಾರಿಯನ್ನು ನುಗ್ಗಿಸಿಕೊಂಡು ಯತ್ನಿಸಿದ್ದಾನೆ. ಆದರೆ ಅದೇ ಅವನು ಮಾಡಿದ ಪೊರಪಾಟು. ಅದರಿಂದ ಲಾರಿ ಏಕಾಏಕಿ ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು ಹಳಿ ಕೆಳಗೆ ನಿಂತುಬಿಟ್ಟಿದೆ. ಅದು ಹಿಂದಕ್ಕೂ ಬಾರದೆ ಮುಂದಕ್ಕೂ ಕದಲದೆ ನಿಂತಲ್ಲೇ ರೋಡಿಗೆ ಅಡ್ಡಾಲಾಗಿ ನಿಂತುಬಿಟ್ಟಿದೆ. ಹಾಗಾಗಿ ಈ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ತೀವ್ರ ತೊಂದರೆಯಾಯಿತು.

ಅದು ಚೆನ್ನೈ ಮತ್ತು ವಿಜಯವಾಡಕ್ಕೆ ಹೋಗುವ ಪ್ರಮುಖ ರೈಲು ಮಾರ್ಗವಾಗಿರುವುದರಿಂದ ಅದರ ಕೆಳಗೆ ಭಾರಿ ಹೊತ್ತು ಲಾರಿಯೊಂದು ಹಳಿಯಡಿ ಸಿಲುಕಿಕೊಂಡಿದ್ದಕ್ಕೆ ಪೊಲೀಸ್​​ ಅಧಿಕಾರಿಗಳು ಪೇಚಿಗೆ ಬಿದ್ದರು. ಜೊತೆಗೆ, ಇನ್ನೊಂದೆಡೆ ಮುಖ್ಯಮಂತ್ರಿ ನಿವಾಸಕ್ಕೆ ತೆರಳುವ ರಸ್ತೆ ಮಾರ್ಗವೂ ಇದರ ಮೂಲಕ ಹಾದುಹೋಗುತ್ತಿರುವುದರಿಂದ ಇನ್ನಷ್ಟು ಅಯೋಮಯವಾಗಿತ್ತು. ಕೊನೆಗೆ ಲಾರಿ ಹೊರತೆಗೆಯಲು ದೊಡ್ಡ ಕ್ರೇನ್ ತರಲಾಯಿತು. ಆದರೆ, ಅದರಿಂದ ಯಾವುದೇ ಫಲ ಸಿಗಲಿಲ್ಲ. ಈ ಮಧ್ಯೆ ಭಾರೀ ಲಾರಿ ಡಿಕ್ಕಿ ಹೊಡೆದಿದ್ದರಿಂದ ದೊಡ್ಡ ಕಬ್ಬಿಣದ ರಾಡ್​ ಲಾರಿಗೆ ಸಿಕ್ಕಿಕೊಂಡುಬಿಟ್ಟಿದೆ. ಇದರಿಂದಾಗಿ ಲಾರಿ ಚಲಿಸಲೂ ಸಾಧ್ಯವಾಗಿರಲಿಲ್ಲ. ಆದರೆ, ಅದನ್ನು ಕ್ರೇನ್ ಸಹಾಯದಿಂದ ತೆಗೆಯಲು ಯತ್ನಿಸಿದಾಗ ಲಾರಿಯಲ್ಲಿದ್ದ ಗೊಬ್ಬರದ ಚೀಲಗಳು ರಸ್ತೆಗೆ ಚೆಲ್ಲಿವೆ. ಅದೇ ವೇಳೆಗೆ ಗೂಡ್ಸ್ ರೈಲು ಬಂದಾಗ ಕೆಲಕಾಲ ರೈಲು ನಿಂತಿತ್ತು.

ಸುಮಾರು ಎರಡು ಗಂಟೆಗಳ ಪ್ರಯತ್ನದ ನಂತರ ಟ್ರ್ಯಾಕ್ ಅಡಿಯಲ್ಲಿ ಸಿಲುಕಿದ್ದ ಲಾರಿಯನ್ನು ಕೊನೆಗೂ ಹೊರಗೆ ತೆಗೆಯಲು ಸಾಧ್ಯವಾಯಿತು. ಆದರೆ ಈ ಲಾರಿಯ ಸಹವಾಸದಿಂದಾಗಿ ಟ್ರ್ಯಾಕ್ ಗೆ ಯಾವುದೇ ಹಾನಿಯಾಗಿಲ್ಲ. ಹಾಗಾಗಿ ರೈಲ್ವೆ ಅಧಿಕಾರಿಗಳು ನಿಟ್ಟುಸಿರುಬಿಟ್ಟಿದ್ದಾರೆ.