ಸಿದ್ದರಾಮಯ್ಯ ಪರ ಬ್ಯಾಟ್ ಮಾಡಿ ಆಶ್ಚರ್ಯ ಹುಟ್ಟಿಸಿದ ಬಿಜೆಪಿ ಶಾಸಕ ಎಸ್ ಎ ರಾಮದಾಸ್!

ಸಿದ್ದರಾಮಯ್ಯ ಪರ ಬ್ಯಾಟ್ ಮಾಡಿ ಆಶ್ಚರ್ಯ ಹುಟ್ಟಿಸಿದ ಬಿಜೆಪಿ ಶಾಸಕ ಎಸ್ ಎ ರಾಮದಾಸ್!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Nov 14, 2022 | 2:16 PM

ಸಿದ್ದರಾಮಯ್ಯ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯಿಂದ ಸ್ಪರ್ಧಿಸಲಿರುವ ಸುದ್ದಿಯಿಂದ ರಾಮದಾಸ್ ಅವರು ಬೇಸರಗೊಂಡಿದ್ದಾರೆ.

ಮೈಸೂರಿನ ಕೃಷ್ಣರಾಜದ ಬಿಜೆಪಿ ಶಾಸಕರಾಗಿರುವ ಎಸ್ ಎ ರಾಮದಾಸ್ (SA Ramadas) ಅವರು ಮೈಸೂರಲ್ಲಿ ಮಾಧ್ಯಮದವರೊಂದಿಗೆ ಮಾತಾಡುವಾಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಪರ ಬ್ಯಾಟ್ ಮಾಡಿದ್ದು ಆಶ್ಚರ್ಯ ಹುಟ್ಟಿಸುತ್ತಿದೆ. ಸಿದ್ದರಾಮಯ್ಯ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕೋಲಾರ (Kolar) ಜಿಲ್ಲೆಯಿಂದ ಸ್ಪರ್ಧಿಸಲಿರುವ ಸುದ್ದಿಯಿಂದ ರಾಮದಾಸ್ ಅವರು ಬೇಸರಗೊಂಡಿದ್ದಾರೆ. ಒಬ್ಬ ಹಿರಿಯನಾಗಿರುವ ಅವರ ಬಗ್ಗೆ ಗೌರವ ಇರುವ ತಮಗೆ ಮೈಸೂರಿನವರೇ ಮುಖ್ಯಮಂತ್ರಿಯಾದರೆ ಅದು ಹೆಮ್ಮೆ ಮತ್ತು ಸಂತೋಷದ ಸಂಗತಿಯಾಗುತ್ತದೆ ಮತ್ತು ಅಂಥದೊಂದು ಆಸೆ ಎಲ್ಲರಿಗೂ ಇರುತ್ತದೆ ಎಂದು ರಾಮದಾಸ್ ಹೇಳಿದರು.