ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಪರ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಪ್ರಚಾರ!

|

Updated on: Feb 13, 2024 | 10:51 AM

ಕಳೆದ ಆರು ತಿಂಗಳಿಂದ ಅಥವಾ ಅದಕ್ಕಿಂತ ಹೆಚ್ಚಿನ ಸಮಯದಿಂದ ಸೋಮಶೇಖರ್ ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ, ಬಿಜೆಪಿ ನಾಯಕರಿಗೆ ಇದು ಗೊತ್ತಿಲ್ಲ ಅಂತೇನಿಲ್ಲ, ಆದರೆ ಶಿಸ್ತುಕ್ರಮ ಜರುಗಿಸಲು ರಾಜ್ಯ ಘಟಕ ಹಿಂದೇಟು ಹಾಕುತ್ತಿದೆ. ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಸೋಮಶೇಖರ್ ಇದುವರೆಗೆ ಬಿಜೆಪಿ ತೊರೆಯುವ ಮಾತಾಡಿಲ್ಲ.

ಬೆಂಗಳೂರು: ಮಾಜಿ ಸಚಿವ ಮತ್ತು ಯಶವಂತಪುರದ ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ (St Somashekhar) ಅವರ ಒಂದು ಕಾಲು ಬಿಜೆಪಿಯಲ್ಲಿ ಮತ್ತೊಂದು ಕಾಲು ಕಾಂಗ್ರೆಸ್ ಪಕ್ಷದಲ್ಲಿ ಅಂತ ಇದುವರೆಗೆ ಕನ್ನಡಿಗರು ಭಾವಿಸಿದ್ದರು. ಆದರೆ ಅವರ ಎರಡೂ ಕಾಲುಗಳು ಕಾಂಗ್ರೆಸ್ ಅಂಗಳದಲ್ಲಿರುವುದು ಸ್ಪಷ್ಟವಾಗಿದೆ. ವಿಡಿಯೋದಲ್ಲಿರುವ ದೃಶ್ಯಗಳನ್ನು ನೋಡಿದರೆ ಯಾವುದೇ ಅನುಮಾನ ಉಳಿಯಲಾರದು. ಸೋಮಶೇಖರ್ ಅವರು ಬೆಂಗಳೂರು ವಿಧಾನ ಪರಿಷತ್ ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ (Teachers constituency by poll) ಅವರು ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ (Puttanna) ಪರ ಪ್ರಚಾರ ಮಾಡಿದ್ದಾರೆ. ಸೋಮವಾರದಂದು ಶಾಸಕರ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಪುಟ್ಟಣ್ಣ ಪರವಾಗಿ ಮತ ಯಾಚಿಸಿದರು. ಕಳೆದ ಆರು ತಿಂಗಳಿಂದ ಅಥವಾ ಅದಕ್ಕಿಂತ ಹೆಚ್ಚಿನ ಸಮಯದಿಂದ ಸೋಮಶೇಖರ್ ಕಾಂಗ್ರೆಸ್ ಪಾಳಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ, ಬಿಜೆಪಿ ನಾಯಕರಿಗೆ ಇದು ಗೊತ್ತಿಲ್ಲ ಅಂತೇನಿಲ್ಲ, ಆದರೆ ಶಿಸ್ತುಕ್ರಮ ಜರುಗಿಸಲು ರಾಜ್ಯ ಘಟಕ ಹಿಂದೇಟು ಹಾಕುತ್ತಿದೆ. ಗಮನಿಸಬೇಕಾದ ಮತ್ತೊಂದು ಸಂಗತಿಯೆಂದರೆ, ಸೋಮಶೇಖರ್ ಇದುವರೆಗೆ ಬಿಜೆಪಿ ತೊರೆಯುವ ಮಾತಾಡಿಲ್ಲ. ಸಿದ್ದರಾಮಯ್ಯ ಮೊದಲ ಆವಧಿಯ ಕಾಂಗ್ರೆಸ್ ಸರ್ಕಾರದಲ್ಲಿ ಸೋಮಶೇಖರ್ ಸಚಿವರಾಗಿದ್ದರು ಮತ್ತು ಮುಖ್ಯಮಂತ್ರಿಯವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ