ನಿಮ್ ಜೊತಿ ಮಾತಾಡದೇ ಬ್ಯಾಡ, ನಾ ಹೇಳಾದೊಂದು ನೀವ್ ಬರ್ಯಾದು ಮತ್ತೊಂದು ಅಂದರು ಯತ್ನಾಳ್
ಯತ್ನಾಳ್ ಖಾಸಗಿ ಹೋಟೆಲೊಂದರಲ್ಲಿ ಪಕ್ಷದ ಸಭೆಯ ನಂತರ ಹೊರಬಿದ್ದ ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಯಾಕೆ ಅಂತ ಕೇಳಿದಾಗ ‘ನಾನು ಹೇಳೋದು ಒಂದು ನೀವು ಬರೆಯೋದೆ ಮತ್ತೊಂದು,’ ಅಂತ ಹೇಳಿದರು.
ಬೆಂಗಳೂರು: ಬಿಜೆಪಿ ಪೈರ್ ಬ್ರ್ಯಾಂಡ್ ಶಾಸಕ (Basangouda Patil Yatnal) ನಿಸ್ಸಂದೇಹವಾಗಿ ಮಾಧ್ಯಮಗಳ ಅಚ್ಚುಮೆಚ್ಚಿನ ಪೊಲಿಟಿಕಲ್ ಫಿಗರ್. ಅವರ ಮಾತುಗಳೇ ಹಾಗಿರುತ್ತವೆ. ತಮ್ಮ ಪಕ್ಷದ ನಾಯಕರ ವಿರುದ್ಧವೂ ಅವರು ನಿರ್ಭಿಡೆ ಮತ್ತು ನಿಷ್ಠುರ ಕಾಮೆಂಟ್ ಗಳನ್ನು (comments) ಮಾಡುತ್ತಾರೆ ಮತ್ತು ತಮ್ಮ ಪಕ್ಷದ ನಾಯಕರಿಗೆ ಮುಜುಗುರ ಆಗುವ ಹಾಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹೊಗಳುತ್ತಾರೆ. ಕಳೆದ ರಾತ್ರಿ ಅವರು ಬೆಂಗಳೂರಿನ ಖಾಸಗಿ ಹೋಟೆಲೊಂದರಲ್ಲಿ ಪಕ್ಷದ ಸಭೆಯ ನಂತರ ಹೊರಬಿದ್ದ ನಂತರ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಲು ನಿರಾಕರಿಸಿದರು. ಯಾಕೆ ಅಂತ ಕೇಳಿದಾಗ ‘ನಾನು ಹೇಳೋದು ಒಂದು ನೀವು ಬರೆಯೋದೆ ಮತ್ತೊಂದು,’ ಅಂತ ಹೇಳಿದರು.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.