ಈ ಸಿನಿಮಾಗೆ ಯಾವುದೇ ಅವಾರ್ಡ್​ ಬಂದರೂ ಅವಳಿಗೇ ಸಲ್ಲಬೇಕು ಎಂದ ರಕ್ಷಿತ್ ಶೆಟ್ಟಿ

ರಕ್ಷಿತ್ ಮಾಧ್ಯಮಗಳ ಜತೆ ಮಾತನಾಡಿ ಸಾಕಷ್ಟು ವಿಚಾರ ಹಂಚಿಕೊಂಡರು. ಚಾರ್ಲಿ ಹೆಸರಿನ ಶ್ವಾನ ಇಡೀ ಸಿನಿಮಾದ ಹೈಲೈಟ್​. ಈ ಸಿನಿಮಾ ಈ ಶ್ವಾನದ ಕೊನೆಯ ಚಿತ್ರ ಎಂಬುದು ರಕ್ಷಿತ್ ಶೆಟ್ಟಿ ಮಾತು.

TV9kannada Web Team

| Edited By: Rajesh Duggumane

Jun 08, 2022 | 8:15 PM

ರಕ್ಷಿತ್ ಶೆಟ್ಟಿ (Rakshit Shetty) ನಟನೆಯ ‘777 ಚಾರ್ಲಿ’ ಸಿನಿಮಾ (777 Charlie) ತೆರೆಗೆ ಬರೋಕೆ ರೆಡಿ ಆಗಿದೆ. ಜೂನ್ 10ರಂದು ಈ ಚಿತ್ರ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್​ಗೂ ಮೊದಲೇ ಮಾಧ್ಯಮದವರಿಗೋಸ್ಕರ ವಿಶೇಷ ಶೋ ಏರ್ಪಡಿಸಲಾಗಿತ್ತು. ಆ ಬಳಿಕ ರಕ್ಷಿತ್ ಮಾಧ್ಯಮಗಳ ಜತೆ ಮಾತನಾಡಿ ಸಾಕಷ್ಟು ವಿಚಾರ ಹಂಚಿಕೊಂಡರು. ಚಾರ್ಲಿ ಹೆಸರಿನ ಶ್ವಾನ ಇಡೀ ಸಿನಿಮಾದ ಹೈಲೈಟ್​. ಈ ಸಿನಿಮಾ ಈ ಶ್ವಾನದ ಕೊನೆಯ ಚಿತ್ರ ಎಂಬುದು ರಕ್ಷಿತ್ ಶೆಟ್ಟಿ ಮಾತು. ‘ಚಾರ್ಲಿ ಅವಳ ಕೊನೆಯ ಸಿನಿಮಾ. ಇದಾದ ಬಳಿಕ ಅವಳು ಯಾವುದೇ ಸಿನಿಮಾದಲ್ಲೂ ನಟಿಸುವುದಿಲ್ಲ. ಈ ಸಿನಿಮಾಗೆ ಯಾವುದೇ ಅವಾರ್ಡ್ ಬಂದರೂ ಅವಳಿಗೆ ಸಲ್ಲಬೇಕು’ ಎಂದಿದ್ದಾರೆ ರಕ್ಷಿತ್.

ಕ್ರಿಕೆಟ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada