ಬಿಜೆಪಿ ನಾಯಕರ ಪ್ರತಿಭಟನೆ, ಕಾಂಗ್ರೆಸ್ ನಾಯಕರ ಪ್ರತಿರೋಧ; ಬೇಸತ್ತ ಸ್ಪೀಕರ್ ಖಾದರ್

|

Updated on: Jul 19, 2024 | 2:19 PM

ಈ ಬಾರಿಯ ಮುಂಗಾರು ಅಧಿವೇಶನದಲ್ಲಿ ಆರೋಗ್ಯಕರ ಚರ್ಚೆ ನಡೆಯದಿರುವುದು ಶೋಚನೀಯ ಸಂಗತಿ. ವಿರೋಧ ಪಕ್ಷದ ನಾಯಕರು ನಡೆಸುವ ಪ್ರತಿಭಟನೆ ನ್ಯಾಯಸಮ್ಮತವೇ, ಅದರೆ ಎಸ್ಐಟಿ ಮತ್ತು ಈಡಿ ತನಿಖೆಯನ್ನು ನಡೆಸುತ್ತಿರಬೇಕಾದರೆ ಪ್ರತಿಭಟನೆ ನಡೆಸುವ ಅವಶ್ಯಕತೆ ಇದೆಯಾ ಅನ್ನೋದು ಪ್ರಮುಖ ಪ್ರಶ್ನೆ.

ಬೆಂಗಳೂರು: ಗುರುವಾರ ಸಾಯಂಕಾಲ ವಿಧಾನಸಭಾ ಕಲಾಪ ಕೊನೆಗೊಂಡಾಗ ಸದನ ಹೇಗಿತ್ತೋ ಶುಕ್ರವಾರ ಬೆಳಿಗ್ಗೆ ಆರಂಭವಾದಾಗಲೂ ಹಾಗೆಯೇ ಇತ್ತು. ಬಿಜೆಪಿ ನಾಯಕರು ಕಲಾಪ ಶುರುವಾಗುತ್ತಿದ್ದಂತೆಯೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಬೃಹತ್ ಅವ್ಯವಹಾರವನ್ನು ಪ್ರಸ್ತಾಪಿಸಿ ನಿನ್ನೆಯಂತೆಯೇ ಸದನದ ಬಾವಿಗಿಳಿದು ಪ್ರತಿಭಟನೆ ಶುರುಮಾಡಿದರು. ಅವರು ಪ್ರತಿಭಟನೆ ಮಾಡಿದರೆ ಇತ್ತ ಅಡಳಿತ ಪಕ್ಷದ ಶಾಸಕರು ಎದ್ದು ನಿಂತು ಅವರನ್ನು ಛೇಡಿಸತೊಡಗಿದರು. ವಿರೋಧ ಪಕ್ಷದವರನ್ನು ಸಮಾಧಾನಪಡಿಸಿ ನಿಮ್ಮ ನಿಮ್ಮ ಸ್ಥಳಗಳಿಗೆ ಹೋಗಿ ಕೂತುಕೊಳ್ಳುವಂತೆ ಹೇಳಿ ಹೈರಾಣಾಗಿದ್ದ ಸ್ಪೀಕರ್ ಯುಟಿ ಖಾದರ್ ಅವರು ಆಡಳಿತ ಪಕ್ಷದವರೂ ಎದ್ದುನಿಂತಾಗ ಅಸಮಧಾನಗೊಂಡರು. ನೀವು ಯಾಕೆ ಎದ್ದು ನಿಂತಿದ್ದು ಸುಮ್ಮನೆ ಕೂತ್ಕೊಳ್ಳಿ ಅನ್ನುತ್ತಾರೆ. ವಿರೋಧ ಪಕ್ಷದ ನಾಯಕ ಅರ್ ಅಶೋಕ ಅವರು, ವಾಲ್ಮೀಕಿ ನಿಗಮದಲ್ಲಿ ಹಗರಣ ನಡೆದಿದುವುದಕ್ಕೆ ಸಹಮತ ಸೂಚಿಸಿ ನಮಗೆ ಬೆಂಬಲ ಸೂಚಿಸುತ್ತಿದ್ದಾರೆ ಎನ್ನುತ್ತಾರೆ. ಮತ್ತೊಬ್ಬರು ಅನುದಾನಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎನ್ನುತ್ತಾರೆ. ಗಲಾಟೆಯ ಕಡಿಮೆಯಾಗದಾದಾಗ ಸ್ಪೀಕರ್ 10 ನಿಮಿಷಗಳ ಕಾಲ ಸದನವನ್ನು ಮುಂದೂಡುತ್ತಾರೆ.

 

ಮತ್ತಷ್ಟು ವಿಡಿಯೋ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:     ಕುಮಾರಸ್ವಾಮಿ ಕಾವೇರಿ ನೀರು ವಿವಾದದ ಬಗ್ಗೆ ಯಾವತ್ತೂ ಸೀರಿಯಸ್ಸಾಗಿಲ್ಲ: ಡಿಕೆ ಶಿವಕುಮಾರ್