ಸಿಎಂ ಸಿದ್ದರಾಮಯ್ಯ ‘ಅಮಾವಾಸ್ಯೆ’ ಹೇಳಿಕೆಗೆ ತಮ್ಮದೇ ಸ್ಟೈಲ್​ನಲ್ಲಿ ತಿವಿದ ತೇಜಸ್ವಿ ಸೂರ್ಯ

Updated on: Oct 23, 2025 | 3:29 PM

ರಾಜ್ಯದ ಬಿಜೆಪಿ ಸಂಸದರನ್ನ ಟೀಕಿಸುವ ವೇಳೆ ತಮ್ಮನ್ನು 'ಅಮಾವಾಸ್ಯೆ' ಎಂದು ಕರೆದಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಬಿಜೆಪಿ ಸಂಸದ ತೇಜಸ್ವಿಸೂರ್ಯ ತಿರುಗೇಟು ನೀಡಿದ್ದಾರೆ. ಚಂದ್ರನ ನೋಡಿ ಪೂಜೆ ಮಾಡುವ ಜನರ ಜೊತೆ ಇದ್ದು ಇದ್ದು ನೀವು ಗೊಂದಲಕ್ಕೆ ಒಳಗಾಗಿದ್ದೀರಿ. ಈ ಬಗ್ಗೆ ತಿಳಿದುಕೊಂಡು ಮುಂದೆ ಹೇಳಿಕೆ ಕೊಡಿ. ನಿಮ್ಮ ಬಗ್ಗೆಯೂ ನಾನು ವೈಯಕ್ತಿಕವಾಗಿ ಸಾಕಷ್ಟು ಟೀಕೆ ಮಾಡಬಹುದು. ಆದರೆ ಸಂಸದನಾಗಿ ನನಗೆ ಅದು ಶೋಭೆ ತರಲ್ಲ ಎಂದು ಕೌಂಟರ್​ ಕೊಟ್ಟಿದ್ದಾರೆ.

ಬೆಂಗಳೂರು, ಅಕ್ಟೋಬರ್​ 23: ತಮ್ಮ ಬಗ್ಗೆ ಸಿಎಂ ಸಿದ್ದರಾಮಯ್ಯ (Siddaramaiah) ನೀಡಿದ್ದ ‘ಅಮಾವಾಸ್ಯೆ’ ಹೇಳಿಕೆಗೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ಬಹುಶಃ ಅಮಾವಾಸ್ಯೆ ಮತ್ತು ಹುಣ್ಣಿಮೆಯ ವ್ಯತ್ಯಾಸ ಗೊತ್ತಿಲ್ಲ. ಈ ದಿನಗಳಲ್ಲೂ ಸೂರ್ಯ ಇರುತ್ತಾನೆ, 365 ದಿನಗಳೂ ಪ್ರಕಾಶಿಸುತ್ತಾನೆ. ಚಂದ್ರನ ನೋಡಿ ಪೂಜೆ ಮಾಡುವ ಜನರ ಜೊತೆ ಇದ್ದು ಇದ್ದು ನೀವು ಗೊಂದಲಕ್ಕೆ ಒಳಗಾಗಿದ್ದೀರಿ. ಈ ಬಗ್ಗೆ ತಿಳಿದುಕೊಂಡು ಮುಂದೆ ಹೇಳಿಕೆ ಕೊಡಿ. ನಿಮ್ಮ ಬಗ್ಗೆಯೂ ನಾನು ವೈಯಕ್ತಿಕವಾಗಿ ಸಾಕಷ್ಟು ಟೀಕೆ ಮಾಡಬಹುದು. ಆದರೆ ಸಂಸದನಾಗಿ ನನಗೆ ಅದು ಶೋಭೆ ತರಲ್ಲ. ನನ್ನ ತಂದೆ ವಯಸ್ಸಿನ ನಿಮ್ಮ ಬಗ್ಗೆ ಮಾತಾಡುವ ಸಂಸ್ಕಾರ ನನ್ನದಲ್ಲ ಎಂದು ತಿವಿದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Published on: Oct 23, 2025 01:11 PM
Follow Us
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More