JP Nadda in Karnataka: ಚಿಕ್ಕಮಗಳೂರಿನ ಸಿಟಿ ರವಿ ಮನೆಯಲ್ಲಿ ಗಣ್ಯರಿಗೆ ಭವ್ಯ ಸಾಂಪ್ರದಾಯಿಕ ಸ್ವಾಗತ

|

Updated on: Feb 21, 2023 | 11:12 AM

ಮನೆಯೊಳಗೆ ಕೂತಿದ್ದ ಕೆಲ ಮಠಾಧೀಶರ ಪಾದಗಳಿಗೆ ನಡ್ಡಾ ನಮಸ್ಕರಿದರು. ಅವರೊಂದಿಗೆ ನಳಿನ್ ಕುಮಾರ್ ಕಟೀಲ್, ಅರುಣ್ ಸಿಂಗ್, ಶೋಭಾ ಕರಂದ್ಲಾಜೆ ಮತ್ತು ಇತರ ನಾಯಕರಿದ್ದರು.

ಚಿಕ್ಕಮಗಳೂರು: ರಾಜ್ಯ ಪ್ರವಾಸದಲ್ಲಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ (JP Nadda) ಅವರಿಗೆ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿಯಾಗಿರುವ ಸಿಟಿ ರವಿ (CT Ravi) ಮನೆಯಲ್ಲಿ ಭವ್ಯ ಸ್ವಾಗತ ಸಿಕ್ಕಿತು. ರವಿಯವರೇ ನಡ್ಡಾರನ್ನು ಹೂಮಾಲೆ ಹಾಕಿ ಬರಮಾಡಿಕೊಂಡರಲ್ಲದೆ ಅವರ ಪಾದ ಮುಟ್ಟಿ ನಮಸ್ಕರಿಸಿದರು. ರವಿ ಮನೆಯೊಳಗೆ ನಡ್ಡಾ ಬರುವಾಗ ಹಾದಿಯಲ್ಲಿ ಹೂಗಳನ್ನು ಎರಚಲಾಯಿತು ಮತ್ತು ಹೆಬ್ಬಾಗಿಲ ಬಳಿ ಮುತ್ತೈದೆಯರಿಂದ ಆರತಿ ಬೆಳಗಿಸಲಾಯಿತು. ಮನೆಯೊಳಗೆ ಕೂತಿದ್ದ ಕೆಲ ಮಠಾಧೀಶರ (pontiff) ಪಾದಗಳಿಗೆ ನಡ್ಡಾ ನಮಸ್ಕರಿದರು. ಅವರೊಂದಿಗೆ ನಳಿನ್ ಕುಮಾರ್ ಕಟೀಲ್, ಅರುಣ್ ಸಿಂಗ್, ಶೋಭಾ ಕರಂದ್ಲಾಜೆ ಮತ್ತು ಇತರ ನಾಯಕರಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 21, 2023 11:08 AM