ಬಿಜೆಪಿ ಓಲೈಕೆ ರಾಜಕಾರಣ ಮಾಡಲ್ಲ, ಪಿಎಂ ಆವಾಸ್ ಯೋಜನೆಯಡಿ ಶೇ. 37 ರಷ್ಟು ಫಲಾನುಭವಿಗಳು ಅಲ್ಪಸಂಖ್ಯಾತರು: ಅಣ್ಣಾಮಲೈ

|

Updated on: May 03, 2024 | 10:29 AM

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಅವಧಿಯಲ್ಲಿ ದಲಿತ ಸಮುದಾಯದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದ್ದರು ಮತ್ತು ಎರಡನೇ ಅವಧಿಯಲ್ಲಿ ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ್ದಾರೆ ಎಂದು ಅಣ್ಣಾಮಲೈ ಹೇಳಿದರು.

ವಿಜಯಪುರ: ಬಿಜೆಪಿ ಅಭ್ಯರ್ಥಿ ರಮೇಶ್ ಜಿಗಜಿಣಗಿ ಅವರ ಪರ ನಿನ್ನೆ ವಿಜಯಪುರದಲ್ಲಿ ಚುನಾವಣಾ ಪ್ರಚಾರ ಮಾಡಿದ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ (K Annamalai) ಬಿಜೆಪಿ ಯಾವತ್ತೂ ಹಿಂದುಳಿದ ವರ್ಗಗಳ, ಅಲ್ಪಸಂಖ್ಯಾತ ಅಥವಾ ಮುಸ್ಲಿಂ ವಿರೋಧಿ ಪಕ್ಷವಾಗಿಲ್ಲ ಆದರೆ, ಕಾಂಗ್ರೆಸ್ ಹಾಗೆ ಫ್ರೇಮ್ ಮಾಡುತ್ತದೆ ಎಂದು ಹೇಳಿದರು. ಅಟಲ್ ಬಿಹಾರಿ ವಾಜಪೇಯಿ (Atal Bihari Vajpayee) ಅವರು ತಾವು ಪ್ರಧಾನ ಮಂತ್ರಿಯಾದ ಮೊದಲ ಅವಕಾಶದಲ್ಲೇ ಎಪಿಜೆ ಅಬ್ದುಲ್ ಕಲಾಂ (APJ Abdul Kalam) ಅವರನ್ನು ರಾಷ್ಟ್ರತಿಗಳನ್ನಾಗಿ ಅಯ್ಕೆ ಮಾಡಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮೊದಲ ಅವಧಿಯಲ್ಲಿ ದಲಿತ ಸಮುದಾಯದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಮಾಡಿದ್ದರು ಮತ್ತು ಎರಡನೇ ಅವಧಿಯಲ್ಲಿ ಆದಿವಾಸಿ ಸಮುದಾಯದ ದ್ರೌಪದಿ ಮುರ್ಮು ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ್ದಾರೆ ಎಂದು ಅಣ್ಣಾಮಲೈ ಹೇಳಿದರು. ಬಿಜೆಪಿ ಯಾವತ್ತೂ ಓಲೈಕೆಯ ರಾಜಕಾರಣ ಮಾಡುವುದಿಲ್ಲ ಎಂದ ಅವರು ಭಾರತದಲ್ಲಿ ಹಿಂದೂಗಳು ಶೇಕಡಾ 87ರಷ್ಟಿದ್ದರೂ ಮೋದಿಯವರವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಶೇಕಡಾ 37 ಅಲ್ಪಸಂಖ್ಯಾತರು ಫಲಾನುಭವಿಗಳಾಗಿದ್ದಾರೆ ಎಂದರು. 2019 ಲೋಕಸಭಾ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ 295 ಆಶ್ವಾಸನೆಗಳಿದ್ದವು ಮತ್ತು ಮೋದಿ ಸರ್ಕಾರ ಅವೆಲ್ಲವುಗಳನ್ನು ಈಡೇರಿಸಿದೆ ಎಂದು ಅಣ್ಣಾಮಲೈ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇನ್ನಷ್ಟು ಓದಿ:  ಕೇವಲ ನರೇಂದ್ರ ಮೋದಿಯವರಿಗೆ ಮಾತ್ರ ದೇಶದ ಪ್ರಧಾನ ಮಂತ್ರಿಯಾಗುವ ಯೋಗ್ಯತೆ ಇದೆ: ಕೆ ಅಣ್ಣಾಮಲೈ, ಬಿಜೆಪಿ ನಾಯಕ