AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಸರ್ವಾಧಿಕಾರ ಹುಟ್ಟಲು ಸಾಧ್ಯವೇ ಇಲ್ಲ ಎಂದ ಮೋದಿ

ಭಾರತದಲ್ಲಿ ಸರ್ವಾಧಿಕಾರ ಹುಟ್ಟಲು ಸಾಧ್ಯವೇ ಇಲ್ಲ ಎಂದ ಮೋದಿ

ನಯನಾ ರಾಜೀವ್
|

Updated on: May 03, 2024 | 10:34 AM

ಇಷ್ಟೊಂದು ದೊಡ್ಡ ಸಂವಿಧಾನವಿದೆ, ಯಾವ ದೇಶದಲ್ಲಿ 900ಕ್ಕೂ ಅಧಿಕ ಟಿವಿ ಚಾನಲ್​ ಇದೆ, ಇಂದು ಅಂಥಾ ದೇಶದಲ್ಲಿ ಸರ್ವಾಧಿಕಾರ ಹುಟ್ಟಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಟಿವಿ9 ನೆಟ್​ವರ್ಕ್​ನ ಸಂದರ್ಶನದಲ್ಲಿ ಪಾಲ್ಗೊಂಡ ಅವರು, ದೇಶದಲ್ಲಿ ನ್ಯಾಯಾಲಯ ವ್ಯವಸ್ಥೆ ಇಷ್ಟೊಂದು ಸ್ಪಂದನಶೀಲವಾಗಿರುವಾಗ ಆ ದೇಶದಲ್ಲಿ ಎಂದೂ ಸರ್ವಾಧಿಕಾರ ಬರಲು ಸಾಧ್ಯವಿಲ್ಲ.

ಭಾವನಾತ್ಮಕ ಸ್ಥಿತಿ ಬಿಜೆಪಿ ಕಡೆಯೇ ಇದೆ, ಯುತಿಯ ಜತೆಗೂ ಇದೆ ಏಕೆಂದರೆ ಬಾಳಾ ಸಾಹೇಬ್​ ಠಾಕ್ರೆ ಅವರ ಶಿವಸೇನೆ ನಮ್ಮ ಜತೆಗೆ ಇದೆ. ಎನ್​ಸಿಪಿ ನಮ್ಮ ಜತೆಗೆ ಇದೆ. ಹೀಗಾಗಿ ಜನರಿಗೆ ಅನಿಸುತ್ತದೆ ಏನಂದ್ರೆ ಪರಿವಾರ ರಾಜಕೀಯದ ಹಸಿವಿನಿಂದ ಬಾಳಾ ಸಾಹೇಬ್ ಠಾಕ್ರೆ ಅವರ ಕನಸನ್ನು ಇವರು ಮುರಿದಿದ್ದು ಏಕೆ? ಒಂದು ಕುಟುಂಬದ ಏಳಿಗೆಗಾಗಿ ನಿಮ್ಮ ಮಕ್ಕಳನ್ನ ಬೆಳೆಸುವುದಕ್ಕಾಗಿಯೇ? ಬಾಳಾ ಸಾಹೇಬ್ ಅವರ ಇಂಥಾ ಪರಂಪರೆ, ಬಾಳಾ ಸಾಹೇಬ್​ ಅವರು ಶಿವಸೈನಿಕರಿಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ರು.

ಬಾಳಾ ಸಾಹೇಬ್ ಠಾಕ್ರೆ ಅವರ ಶಿವಸೇನೆ ಆಗಿದೆ, ಅದು ಇಂದು ನಮ್ಮ ಜತೆ ಇದೆ, ಹೀಗಾಗಿ ಮಹಾರಾಷ್ಟ್ರದ ಮತದಾರರು ಭಾವನಾತ್ಮಕವಾಗಿ ನಮ್ಮ ಜತೆ ಇದ್ದಾರೆ. ಇನ್ನು ಶರದ್ ಅವರ ವಿಚಾರ ತೆಗದುಕೊಂಡರೆ ಇದು ರಾಜಕೀಯ ಸಮಸ್ಯೆ ಅಲ್ಲ, ಅವರು ಅದನ್ನು ಎಷ್ಟೇ ರಾಜಕೀಯ ಸಮಸ್ಯೆ ಎಂದು ಬಿಂಬಿಸಿದ್ರೂ ಅದು ಕುಟುಂಬ ಸಮಸ್ಯೆಯಾಗಿದೆ. ಈ ವಯಸ್ಸಿನಲ್ಲಿ ಕುಟುಂಬವನ್ನು ಸಂಭಾಳಿಸಲು ಸಾಗುತ್ತಿಲ್ಲ ಇನ್ನು ಮಹಾರಾಷ್ಟ್ರವನ್ನು ಹೇಗೆ ನಿಭಾಯಿಸುತ್ತಾರೆ ಎಂದರು.

ಔರಂಗಜೇಬನನ್ನು ಹೊಗಳುವವರು, ಸಾವರ್ಕರ್​ನ್ನು ಅಪಮಾನ ಮಾಡುವವರ ಬಳಿ ಠಾಕ್ರೆ ಮಗ ಕೂತರೆ ಜನರ ಮನಸ್ಸಿನಲ್ಲಿ ಸಹಜವಾಗಿ ಪ್ರಶ್ನೆಗಳು ಮೂಡುತ್ತವೆ. ಉದ್ಧವ್ ಠಾಕ್ರೆಯಲ್ಲಿ ಬಾಳಾಸಾಹೇಬ್​ ವಾರಸುದಾರ ಎಂದು ನೀವು ಒಪ್ಪಿಕೊಳ್ಳುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮೋದಿ ಹೌದು ಬಯಾಲಾಜಿಕಲಿ ಅವರು ಬಾಳಾ ಸಾಹೇಬ್ ಅವರ ಮಗ, ಒಂದೊಮ್ಮೆ ಅವರಿಗೆ ಕಷ್ಟ ಬಂತೆಂದರೆ ಮೊದಲು ಅವರ ಜತೆ ಹೋಗಿ ನಿಲ್ಲುವುದು ನಾನೇ ಒಂದು ಕುಟುಂಬದಂತೆ ಆದರೆ ರಾಜಕೀಯವಾಗಿ ನಾನು ಬಾಳಾ ಸಾಹೇಬ್ ಸಿದ್ಧಾಂತವನ್ನು ಗೌರವಿಸುತ್ತೇನೆ ಅದರಂತೆಯೇ ನಡೆದುಕೊಳ್ಳುತ್ತಿದ್ದೇನೆ ಎಂದರು.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ