ಏಕರೂಪ ನಾಗರಿಕ ಸಂಹಿತೆ ಜಾರಿಗೆ ಕುರಿತು ಪ್ರಧಾನಿ ಮೋದಿ ಮಹತ್ವದ ಹೇಳಿಕೆ
PM Modi Interview with Tv9 editors: ದೇಶ ಸ್ವತಂತ್ರಗೊಂಡ ದಿನದಿಂದಲೇ ಗೋವಾದಲ್ಲಿ ಯುಸಿಸಿ ಜಾರಿಯಲ್ಲಿದೆ. ಅಲ್ಲದೆ ಗೋವಾದಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗೋವಾದಲ್ಲಿ ಯಾವುದೇ ಸಮಸ್ಯೆಯಾಗುತ್ತಿಲ್ಲ. ಗೋವಾದಲ್ಲಿ ಜನ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಗೋವಾ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಗೋವಾದಲ್ಲಿ ಸಮಾನ ನಾಗರಿಕ ಸಂಹಿತೆಯಿಂದ ಸುಖ, ಸಮೃದ್ಧಿಯಿಂದ ಬದುಕುತ್ತಾರೆ ಅಂದ್ರೆ, ಬೇರೆ ರಾಜ್ಯಗಳಿಗೂ ಬೇಕು ಅಂತ ಅನ್ನಿಸುತ್ತಿದೆ ಎಂದು ಟಿವಿ9 ನೆಟ್ವರ್ಕ್ನ ಆರ್ ಮಂದಿ ಸಂಪಾದಕರ ಜೊತೆ ದುಂಡುಮೇಜಿನ ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿದರು. ಮೋದಿ ಮಾತಿನ ವಿಡಿಯೋ ಇಲ್ಲಿದೆ.
ನವದೆಹಲಿ/ಬೆಂಗಳೂರು ಮೇ.03: ಏಕರೂಪ ನಾಗರಿಕ ಸಂಹಿತೆ ಬಗ್ಗೆ ಸಂವಿಧಾನದಲ್ಲೂ ಬರೆಯಲಾಗಿದೆ, ಇದು ಸಂವಿಧಾನದ ಭಾವನೆಯಾಗಿದೆ. ನೀವು ಇದನ್ನು ಯಾಕೆ ಜಾರಿ ಮಾಡಿಲ್ಲ ಅಂತ ಈ ಹಿಂದಿನ ಪ್ರಧಾನಿಗಳಿಗೆ ಮಾಧ್ಯಮದವರು ಪ್ರಶ್ನಿಸಬೇಕಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಟಿವಿ9 ನೆಟ್ವರ್ಕ್ನ (TV9 Network) 6 ಭಾಷೆಗಳ ಸಂಪಾದಕರು ನಡೆಸಿದ ದುಂಡುಮೇಜಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಯಾಕಂದರೆ ಇಷ್ಟು ವರ್ಷ ಅಧಿಕಾರದಲ್ಲಿದ್ದರು. ಯಾಕಂದ್ರೆ ಇಷ್ಟು ದೊಡ್ಡ ದೇಶ ನಡೆಸಬೇಕಾದ್ರೆ ಒಂದು ಕಾನೂನು ಬೇಕಾ? ಬೇಡ್ವಾ? ಎಂದು ಪ್ರಶ್ನಿಸಿದರು.
ಸುಪ್ರೀಂಕೋರ್ಟ್ ಹಲವು ಬಾರಿ ಅಧಿಕಾರಕ್ಕೆ ಬರುವ ಸರ್ಕಾರಗಳಿಗೆ ಯುಸಿಸಿ ಬಗ್ಗೆ ಸೂಚನೆ ಕೊಡುತ್ತಿತ್ತು. ಈ ಬಗ್ಗೆ ಅವರನ್ನು ಕೇಳಬೇಕು. ಯುಸಿಸಿ ಬಗ್ಗೆ ಕೇಳುವವರಿಗೆ ಹೇಳಲು ಬಯಸುವುದೇನಂದರೆ, ಒಂದು ಬಾರಿ ಗೋವ ರಾಜ್ಯವನ್ನು ನೋಡಿ. ದೇಶ ಸ್ವತಂತ್ರಗೊಂಡ ದಿನದಿಂದಲೇ ಗೋವಾದಲ್ಲಿ ಯುಸಿಸಿ ಜಾರಿಯಲ್ಲಿದೆ. ಅಲ್ಲದೆ ಗೋವಾದಲ್ಲಿ ಅಲ್ಪಸಂಖ್ಯಾತರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್ನ ಆಲೋಚನೆಗಳಿವೆ: ಪ್ರಧಾನಿ ಮೋದಿ
ಗೋವಾದಲ್ಲಿ ಯಾವುದೇ ಸಮಸ್ಯೆಯಾಗುತ್ತಿಲ್ಲ. ಗೋವಾದಲ್ಲಿ ಜನ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ಗೋವಾ ಅತಿವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಗೋವಾದಲ್ಲಿ ಸಮಾನ ನಾಗರಿಕ ಸಂಹಿತೆಯಿಂದ ಸುಖ, ಸಮೃದ್ಧಿಯಿಂದ ಬದುಕುತ್ತಾರೆ ಅಂದ್ರೆ, ಬೇರೆ ರಾಜ್ಯಗಳಿಗೂ ಬೇಕು ಅಂತ ಅನ್ನಿಸುತ್ತಿದೆ. ಈ ಬಗ್ಗೆ ಹೇಗೆ ಮುಂದುವರಿಯಬೇಕು ಅಂತ ಸಂದರ್ಭಕ್ಕೆ ತಕ್ಕಂತೆ ನಾವು ವ್ಯವಹರಿಸುತ್ತೇವೆ. ದೇಶದ ಏಕತೆಗಾಗಿ ಎಲ್ಲಿ ಸಂವಿಧಾನ ಇರಲಿಲ್ಲವೋ ಅಲ್ಲಿಗೆ ತಲುಪಿದ್ದೇವೆ ಎಂದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ