AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್​​ನ ಆಲೋಚನೆಗಳಿವೆ: ಪ್ರಧಾನಿ ಮೋದಿ

ಕಾಂಗ್ರೆಸ್​ ಪ್ರಣಾಳಿಕೆಯಲ್ಲಿ ಮುಸ್ಲಿಂ ಲೀಗ್​​ನ ಆಲೋಚನೆಗಳಿವೆ: ಪ್ರಧಾನಿ ಮೋದಿ

ವಿವೇಕ ಬಿರಾದಾರ
|

Updated on: May 03, 2024 | 9:53 AM

PM Modi Interview with Tv9 editors: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆ ಮುಸ್ಲಿಂ ಲೀಗ್​ನ ಚಿಂತನೆಗಳನ್ನು ಒಳಗೊಂಡಿದೆ ಎಂದು ಟಿವಿ9 ನೆಟ್ವರ್ಕ್​​ನ ಆರ್ ಮಂದಿ ಸಂಪಾದಕರ ಜೊತೆ ದುಂಡುಮೇಜಿನ ಸಂದರ್ಶನದಲ್ಲಿ ಪ್ರಧಾನಿ ಮೋದಿ ಹೇಳಿದರು. ಮೋದಿ ಮಾತಿನ ವಿಡಿಯೋ ಇಲ್ಲಿದೆ.​

ನವದೆಹಲಿ/ಬೆಂಗಳೂರು ಮೇ.03: ಮುಸ್ಲಿಂ ಲೀಗ್​​ನ ಆಲೋಚನೆಗಳು ಕಾಂಗ್ರೆಸ್​ ಪ್ರಣಾಳಿಕೆಯಲ್ಲಿವೆ ಎಂದು ನೇರವಾಗಿ ಹೇಳಿದ್ದೇನೆ. ಹೋಲಿಕೆ ಮಾಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಹೇಳಿದರು. ಟಿವಿ9 ನೆಟ್​ವರ್ಕ್​ನ (TV9 Network) 6 ಭಾಷೆಗಳ ಸಂಪಾದಕರು ನಡೆಸಿದ ದುಂಡುಮೇಜಿನ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಸ್ಲಿಂ ಲೀಗ್​ನ ಅಂಶಗಳು ಅವರ ಪ್ರಣಾಳಿಯಲ್ಲೂ ಕಂಡು ಬರುತ್ತಿದೆ. ಬಟ್ಟೆ ಯಾವುದನ್ನೇ ತೊಡಿಸಲಿ, ಆದರೆ ಗುಪ್ತ ಅಜೆಂಡಾ ಸ್ಪಷ್ಟವಾಗಿ ಕಾಣಿಸುತ್ತದೆ ಎಂದರು.

ಅವರು ಹೇಗೆಂದರೆ ನಮ್ಮ ಪ್ರಣಾಳಿಕೆ ನೋಡಿ ಮೋದಿ ಭಯಪಡುತ್ತಾರೆ, ನಾವು ಹೇಳಿದ ಕೂಡಲೇ ಭೂಕಂಪ ಆಗಿಬಿಡುತ್ತೆ ಅಂತ ಹೇಳುತ್ತಾನೆ ಇರುತ್ತಾರೆ. ಅವರು ಅದೇ ಖುಷಿಯಲ್ಲಿ ಬದುಕಲು ಬಿಡಿ. ಅವರು ಮಜಾ ಅನುಭವಿಸಲಿ ಬಿಡಿ.

ಇದನ್ನೂ ಓದಿ: ಸಂವಿಧಾನದ ಗೌರವವನ್ನು ಕಾಂಗ್ರೆಸ್ ಪಕ್ಷದವರು ಹಾಳು ಮಾಡಿದ್ದಾರೆ: ಪ್ರಧಾನಿ ಮೋದಿ ವಾಗ್ದಾಳಿ

ಅವರ ವರ್ತನೆಯಿಂದಲೇ ಗೊತ್ತಾಗುತ್ತಿದೆ. ಈಗ ಅವರ ಉದ್ದೇಶ ಏನಂದ್ರೆ, ಕಾಂಗ್ರೆಸ್​ ಪಕ್ಷವನ್ನು ಮಾವೋವಾದಿಗಳು ಕಬಳಿಸಿಬಿಟ್ಟಿದ್ದಾರೆ. ಈಗ ಅವರು ದೇಶದ ಪ್ರತಿಯೊಂದರಲ್ಲಿ ಲೈಸೆನ್ಸ್​ ರಾಜ್​ ತರುವ ಧಾವಂತದಲ್ಲಿದ್ದಾರೆ ಎಂದು ವಾಗ್ದಾಳಿ ಮಾಡಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ