ಕೋಲಾರ: ಈಜಲು ತೆರಳಿದ್ದ ಯುವಕ ಕೃಷಿ ಹೊಂಡದಲ್ಲಿ ಮುಳುಗಿ ಸಾವು, ವಿಡಿಯೋ ಮಾಡಿದ ತಂಗಿ

ಕೋಲಾರ: ಈಜಲು ತೆರಳಿದ್ದ ಯುವಕ ಕೃಷಿ ಹೊಂಡದಲ್ಲಿ ಮುಳುಗಿ ಸಾವು, ವಿಡಿಯೋ ಮಾಡಿದ ತಂಗಿ

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: Ganapathi Sharma

Updated on:May 03, 2024 | 10:46 AM

ಯುವಕ ನೀರಿಗೆ ಧುಮುಕಿದಲ್ಲಿಂದಲೇ ಆತನ ತಂಗಿ ವಿಡಿಯೋ ಮಾಡುತ್ತಿದ್ದರು. ಅಣ್ಣ ಮುಳುಗುತ್ತಿದ್ದಾನೆ ಎಂಬುದು ಅವರಿಗೂ ಅವರಿವಾದಂತಿಲ್ಲ. ದುರದೃಷ್ಟವಶಾತ್, ನೋಡ ನೋಡುತ್ತಿದ್ದಂತೆಯೇ ಗೌತಮ್ ಗೌಡ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ. ತಂಗಿಯ ಹಾಗೂ ಜತೆಗಿದ್ದ ಹುಡುಗರ ಅಸಹಾಯಕತೆಯ ನಡುವೆ ಯುವಕ ಮುಳುಗುತ್ತಿರುವ ಹೃದಯ ಭಾರವಾಗಿಸುವ ದೃಶ್ಯ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕೋಲಾರ, ಮೇ 3: ಈಜಲು ತೆರಳಿದ್ದ ವ್ಯಕ್ತಿಯೊಬ್ಬರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟಿದ್ದು, ಅಣ್ಣ ಮುಳುಗುತ್ತಿದ್ದಾನೆ ಎಂಬುದು ಅರಿವಾಗದೆ ಸ್ವತಃ ತಂಗಿಯೇ ಅದರ ವಿಡಿಯೋ ಚಿತ್ರೀಕರಣ ಮಾಡಿದ ಹೃದಯ ವಿದ್ರಾವಕ ಘಟನೆ ಕೋಲಾರ (Kolar) ತಾಲೂಕಿನ ನಾಗನಾಳ (Naganala) ಗ್ರಾಮದಲ್ಲಿ ಸಂಭವಿಸಿದೆ. ಮೃತ ಯುವಕನನ್ನು ಗೌತಮ್ ಗೌಡ (26) ಎಂದು ಗುರುತಿಸಲಾಗಿದೆ. ಈತ ಮೈಸೂರಿನ (Mysuru) ರಾಘವೇಂದ್ರನಗರ ಬಡಾವಣೆ ನಿವಾಸಿಯಾಗಿದ್ದಾರೆ.

ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗೌತಮ್ ಗೌಡ ತಂದೆಯ ಊರಾದ ವೇಮಗಲ್ ಸಮೀಪದ ನಾಗನಾಳ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ, ಸರಿಯಾಗಿ ಈಜು ಬಾರದಿದ್ದರೂ ಈಜಲು ಹೋಗಿದ್ದರು. ಆರಂಭದಲ್ಲಿ ಚೆನ್ನಾಗಿಯೇ ಈಜುತ್ತಿದ್ದ ಅವರು ಕ್ರಮವೇಣ ಮುಳುಗಲಾರಂಭಿಸಿದರು.

ಇದನ್ನೂ ಓದಿ: ಈ ಬಾರ್ಡರ್​ ದಾಟಿ ನಾನು ಬರಲ್ಲ, ನೀನು ಬರಬೇಡ, ಮಾತು ಮಾತಲ್ಲೇ ಇರಲಿ; ಎದುರಾದ ಹುಲಿ-ಕರಡಿ, ವಿಡಿಯೋ ವೈರಲ್​

ಯುವಕ ನೀರಿಗೆ ಧುಮುಕಿದಲ್ಲಿಂದಲೇ ಆತನ ತಂಗಿ ವಿಡಿಯೋ ಮಾಡುತ್ತಿದ್ದರು. ಅಣ್ಣ ಮುಳುಗುತ್ತಿದ್ದಾನೆ ಎಂಬುದು ಅವರಿಗೂ ಅವರಿವಾದಂತಿಲ್ಲ. ದುರದೃಷ್ಟವಶಾತ್, ನೋಡ ನೋಡುತ್ತಿದ್ದಂತೆಯೇ ಗೌತಮ್ ಗೌಡ ನೀರಲ್ಲಿ ಮುಳುಗಿ ಪ್ರಾಣ ಬಿಟ್ಟದ ದೃಶ್ಯ ವಿಡಿಯೋದಲ್ಲಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published on: May 03, 2024 10:26 AM