ಡಿಕೆಶಿ ಸಂಗ್ರಹಿಸಿದ 1 ಕೋಟಿ ರೂ. ಗೆ ಲೆಕ್ಕ ಕೇಳ್ತಾರೆ, ಪಿಎಮ್ ಕೇರ್ಸ್ ನಿಧಿಗೆ ಬಂದು ಬಿದ್ದ ಕೋಟಿಗಟ್ಟಲೆ ಹಣದ ರೂ. ಲೆಕ್ಕ ಕೊಟ್ಟಿದ್ದಾರಾ? ಸಿದ್ದರಾಮಯ್ಯ
ಬೆಂಗಳೂರಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಶಾಲಾ ಮಕ್ಕಳಿಗೆ ಬೂಟು, ಸಾಕ್ಸ್, ಸಮವಸ್ತ್ರ ವಿತರಿಸಲು ಸರ್ಕಾರ ಬಹಳ ವಿಳಂಬ ಮಾಡಿದೆ, ಅವೆಲ್ಲವನ್ನು ಕೂಡಲೇ ವಿತರಿಸಬೇಕು ಅಂತ ಹೇಳಿದರು.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಸರ್ಕಾರದ (BJP government) ವಿರುದ್ಧ ಟೀಕಾಪ್ರಹಾರ ಮುಂದುವರೆಸಿ ಕೋವಿಡ್ ಸಮಯದಲ್ಲಿ ಕೆಲಸ ಕಳೆದುಕೊಂಡ ಕಾರ್ಮಿಕರಿಗೆ (labours) ಡಿಕೆ ಶಿವಕುಮಾರ ಅವರು ದೇಣಿಗೆ ರೂಪದಲ್ಲಿ ಸಂಗ್ರಹಿಸಿ ವಿತರಿಸಿದ ಒಂದು ಕೋಟಿ ರೂ. ಗಳಿಗೆ ಲೆಕ್ಕ ಕೇಳ್ತಾರೆ, ಪಿಮ ಎಮ್ ಕೇರ್ಸ್ (PM Cares) ನಿಧಿಗೆ ಸಾವಿರಾರು ಕೋಟಿ ರೂ. ಸಂಗ್ರವಾಯಿತಲ್ಲ, ಅದಕ್ಕೆ ಲೆಕ್ಕ ಕೊಟ್ಟಿದ್ದಾರಾ? ಅಂತ ಕೇಳಿದರು. ಬೆಂಗಳೂರಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಶಾಲಾ ಮಕ್ಕಳಿಗೆ ಬೂಟು, ಸಾಕ್ಸ್, ಸಮವಸ್ತ್ರ ವಿತರಿಸಲು ಸರ್ಕಾರ ಬಹಳ ವಿಳಂಬ ಮಾಡಿದೆ, ಅವೆಲ್ಲವನ್ನು ಕೂಡಲೇ ವಿತರಿಸಬೇಕು ಅಂತ ಹೇಳಿದರು.
ಇದನ್ನೂ ಓದಿ: ‘ಓಂ’ ಸಿನಿಮಾ ಸ್ಟೈಲ್ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಗೆ ಶಿವರಾಜ್ಕುಮಾರ್ ಎಂಟ್ರಿ; ಇಲ್ಲಿದೆ ವಿಡಿಯೋ