ಬಿ.ವೈ.ವಿಜಯೇಂದ್ರ ನೇತೃತ್ವದ ಸಭೆಯಲ್ಲೇ ಇಬ್ಬರು ನಾಯಕರ ಬೆಂಬಲಗರಿಂದ ಗಲಾಟೆ

Edited By:

Updated on: Oct 04, 2026 | 4:35 PM

ಸೇವಾ ಸಂಕಲ್ಪ ಅಭಿಯಾನದಡಿ ಬೂತ್ ವಿಜಯ ಸಂಕಲ್ಪ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ದಿಲೀಪ್ ಕುಮಾರ್ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ಗ್ಯಾಸ್ ಬಾಬು ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲೇ ಈ ಗಲಾಟೆಯಾಗಿದೆ.

ತುಮಕೂರು, (ಅಕ್ಟೋಬರ್ 4): ಸೇವಾ ಸಂಕಲ್ಪ ಅಭಿಯಾನದಡಿ ಬೂತ್ ವಿಜಯ ಸಂಕಲ್ಪ ಸಭೆಯಲ್ಲಿ ಬಿಜೆಪಿ ಕಾರ್ಯಕರ್ತರು ಗಲಾಟೆ ಮಾಡಿಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ದಿಲೀಪ್ ಕುಮಾರ್ ಹಾಗೂ ಟಿಕೆಟ್ ಆಕಾಂಕ್ಷಿಯಾಗಿದ್ದ ಗ್ಯಾಸ್ ಬಾಬು ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರಿನಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸಮ್ಮುಖದಲ್ಲೇ ಈ ಗಲಾಟೆಯಾಗಿದೆ. ಗ್ಯಾಸ್ ಬಾಬು ಭಾಷಣಕ್ಕೆ ಅಡ್ಡಿಪಡಿಸಿದ ದಿಲೀಪ್ ಬೆಂಬಲಿಗರು ಅಡ್ಡಿಪಡಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಗ್ಯಾಸ್ ಬಾಬು ವೇದಿಕೆಯಿಂದ ಕೆಳಗೆ ಬಂದು ದಿಲೀಪ್ ಬೆಂಬಲಿಗರ ಜತೆ ಬಾಬು ವಾಗ್ವಾದಕ್ಕಿಳಿದರು. ಈ ವೇಳೆ ವಿಜಯೇಂದ್ರ ಮಧ್ಯಪ್ರದೇಶಿಸಿ ಎಲ್ಲರನ್ನೂ ಸಮಾಧಾನಪಡಿಸಿದರು.

ಬಳಿಕ ಮಾತನಾಡಿದ ವಿಜಯೇಂದ್ರ, ಕುಂಬಾರನಿಗೆ ವರ್ಷ, ದೊಣ್ಣೆಗೆ ನಿಮಿಷ ಅನ್ನೋ ಹಾಗಾಗಿದೆ.
ವೇದಿಕೆ ಮೇಲೆ ಕುಳಿತ ಮುಖಂಡರು, ಹಿರಿಯರು, ಮತ್ತೊಬ್ಬರ ಕಡೆ ಬೆರಳು ತೋರಿಸುವಾಗ ನಾಲ್ಕು ಬೆರಳು ನಮ್ಮ ಕಡೆ ಇರುತ್ತೆ ಅನ್ನೊದನ್ನು ಮರೆಯಬಾರದು. ರಾಜ್ಯಾಧ್ಯಕ್ಷರು ಬಂದಾಗ ಒಬ್ಬರಿಗೊಬ್ಬರು ಬಡೆದಾಡಿಕೊಳ್ಳುವುದು ರಾಜ್ಯ ನೋಡುತ್ತದೆ. ಕೆಲವರಿಗೆ ಅವರು ಬಂದ ಮೇಲೆ ಬಿಜೆಪಿ ಹುಟ್ಟಿದೆ ಅನ್ನೋ ಭ್ರಮೆ ಇದೆ. ಗುಬ್ಬಿ ಹಾಗೂ ತುಮಕೂರಿನವರಿಗೆ ಎಲ್ಲರಿಗೂ ಸೇರಿಸಿ ಹೇಳುತ್ತಿದ್ದೇನೆ. ನೀವು ಕಿತ್ತಾಡಿಕೊಳ್ಳದಿದ್ದರೆ ಯಾವಾಗಲೋ ಇಲ್ಲಿ ಬಿಜೆಪಿ ಗೆಲ್ಲುತ್ತಿತ್ತು. ನಿಮ್ಮಿಬ್ಬರ ಜಗಳದಲ್ಲಿ ನಾನೇ ಬಂದು ನಿಲ್ತೀನಿ ಎಂದರು.

Loading...
Unable to load recommendations.
Follow Us
ಜಗದೀಶ ಬಿ.

ಜಗದೀಶ್​ ಬಸವರಾಜು ಟಿವಿ9 ಕನ್ನಡದ ಜಿಲ್ಲಾ ವರದಿಗಾರರಾಗಿದ್ದಾರೆ. ಪ್ರಸ್ತುತ ಅವರು ತುಮಕುರು ಜಿಲ್ಲಾ ಸುದ್ದಿಗಳ ವರದಿ ಮಾಡುತ್ತಿದ್ದಾರೆ. ಹುಟ್ಟಿದ್ದು, ಬೆಳೆದಿದ್ದು ಬೆಂಗಳೂರಿನಲ್ಲಿ. ಪತ್ರಿಕೋದ್ಯಮ ಓದಿದ್ದು, ವೃತ್ತಿ ಬದುಕು ಆರಂಭಿಸಿದ್ದು ಕೂಡಾ ಬೆಂಗಳೂರಿನಲ್ಲಿ. ಟಿವಿ9ನಲ್ಲಿ ಎಂಟು ವರ್ಷ ಸಹಿತ ಹತ್ತು ವರ್ಷದ ಕ್ರೈಂ ವರದಿಗಾರಿಕೆಯ ಅನುಭವದ ಜೊತೆ ಸದ್ಯ ೨೦೨೫ರಿಂದ ತುಮಕೂರು ಜಿಲ್ಲಾವರದಿಗಾರನಾಗಿ ಮಾದ್ಯಮದ ವೃತ್ತಿ ಬದುಕು ಮುಂದುವರೆದಿದೆ.

Read More