PM Modi in Karnataka: ಪ್ರಧಾನಿ ಬೆಂಗಳೂರಿಗೆ ಆಗಮಿಸುವ ಮೊದಲೇ ಮೇಖ್ರಿ ಸರ್ಕಲ್​​ನಲ್ಲಿ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದರು

PM Modi in Karnataka: ಪ್ರಧಾನಿ ಬೆಂಗಳೂರಿಗೆ ಆಗಮಿಸುವ ಮೊದಲೇ ಮೇಖ್ರಿ ಸರ್ಕಲ್​​ನಲ್ಲಿ ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 20, 2022 | 3:05 PM

ಮೋದಿ, ಅಮಿತ್ ಶಾ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಜಯಘೋಷ ಮಾಡುತ್ತಿರುವ ಅವರು ಬೊಲೋ ಭಾರತ್ ಮಾತಾ ಕಿ ಜೈ ಅಂತಲೂ ಹೇಳುತ್ತಿದ್ದಾರೆ. ಮೇಖ್ರಿ ಸರ್ಕಲ್ ಸಂಪೂರ್ಣವಾಗಿ ಕೇಸರಿಮಯವಾಗಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ಯಲಹಂಕ ವಾಯುನೆಲೆ ನಿಲ್ದಾಣಕ್ಕೆ ಬಂದಿಳಿಯುವ ಮುಂಚಿನ ದೃಶ್ಯ ಇದು ಮಾರಾಯ್ರೇ. ಪ್ರಧಾನಿಗಳು ಮೇಖ್ರಿ ಸರ್ಕಲ್ (Mekhri Circle) ಮೂಲಕವಾಗಿಯೇ ಭಾರತೀಯ ವಿಜ್ಞಾನ ಸಂಸ್ಥೆಗೆ ತೆರಳಲಿದ್ದಾರೆ ಅಂತ ಗೊತ್ತಿದ್ದ ಸಹಸ್ರಾರು ಬಿಜೆಪಿ ಕಾರ್ಯಕರ್ತರು (BJP workers) ಬೆಳಗ್ಗೆ 8 ಗಂಟೆಯಿಂದಲೇ ಅಲ್ಲಿ ಜಮಾಗೊಳ್ಳಲಾರಂಭಿಸಿದ್ದರು. ಅನೇಕ ಮಹಿಳಾ ಕಾರ್ಯಕರ್ತರನ್ನು ಸಹ ಇಲ್ಲಿ ನೋಡಬಹುದು. ಮೋದಿ, ಅಮಿತ್ ಶಾ ಮತ್ತು ಬಸವರಾಜ ಬೊಮ್ಮಾಯಿ ಅವರಿಗೆ ಜಯಘೋಷ ಮಾಡುತ್ತಿರುವ ಅವರು ಬೊಲೋ ಭಾರತ್ ಮಾತಾ ಕಿ ಜೈ ಅಂತಲೂ ಹೇಳುತ್ತಿದ್ದಾರೆ. ಮೇಖ್ರಿ ಸರ್ಕಲ್ ಸಂಪೂರ್ಣವಾಗಿ ಕೇಸರಿಮಯವಾಗಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.