ಸಾರ್ವಜಿನಿಕವಾಗಿ ತಮ್ಮ ಘನತೆಗೆ ತಕ್ಕುದಲ್ಲದ ಭಾಷೆ ಬಳಸಿದ ಬೆಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್!
ತಾನು ಶಾಸಕ, ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಅನ್ನೋದನ್ನು ಮರೆತು ಹೇಳಿಕೆಗಳನ್ನು ನೀಡುವುದು ಯತ್ನಾಳ್ ಅವರ ಜಾಯಮನ.
ಧಾರವಾಡ: ಭಾರತೀಯ ಜನತಾ ಪಕ್ಷದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ವಿವಾದಾತ್ಮಕ ಹೇಳಿಕೆಗಳನ್ನು ನೀಡುವುದರಲ್ಲಿ ಸಿದ್ಧಹಸ್ತರು. ತಾನು ಶಾಸಕ, ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ ಅನ್ನೋದನ್ನು ಮರೆತು ಹೇಳಿಕೆಗಳನ್ನು ನೀಡುವುದು ಅವರ ಜಾಯಮನ. ಧಾರವಾಡದಲ್ಲಿ (Dharwad) ಗುರುವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು ಯಾವುದೋ ವ್ಯಕ್ತಿ ಅಪದ್ಧವಾಗಿ ಮಾತಾಡಿದ್ದಕ್ಕೆ ಸಾರ್ವಜನಿಕವಾಗಿ (publicly) ಸವಾಲೆಸೆಯುತ್ತಾರೆ ಅದೂ ಅವರ ಘನತೆಗೆ ತಕ್ಕುದಲ್ಲದ ಪದಗಳನ್ನು ಬಳಿಸಿ! ಅವರ ಮಾತಿನಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆಯುಂಟಾಗಬಹುದಾದ ಅಂಶವನ್ನು ನೀವು ಗಮನಿಸಬಹುದು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ