ನಿರ್ಧಾರ ಬದಲಿಸಿದ ಮಧುಗಿರಿ ಜೆಡಿ(ಎಸ್) ಶಾಸಕ ಎಮ್ ವಿ ವೀರಭದ್ರಯ್ಯ, ಪುನಃ ಸ್ಪರ್ಧೆಗೆ ಅಣಿ!

ತಾವು ಗೆದ್ದು ಪಕ್ಷವನ್ನೂ ಗೆಲ್ಲಿಸಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಪುನಃ ಮುಖ್ಯಮಂತ್ರಿ ಮಾಡುವುದೇ ತಮ್ಮ ಗುರಿ ಎಂದು ವೀರಭದ್ರಯ್ಯ ಹೇಳಿದರು.

TV9kannada Web Team

| Edited By: Arun Belly

Nov 24, 2022 | 12:48 PM

ತುಮಕೂರು: ನಿಮಗೆ ನೆನಪಿರಬಹುದು, ಕೆಲವು ತಿಂಗಳುಗಳ ಹಿಂದೆ ಮಧುಗಿರಿಯ ಜೆಡಿ(ಎಸ್) ಅ ಶಾಸಕ ಎಮ್ ವಿ ವೀರಭದ್ರಯ್ಯನವರು (MV Veerabhadraiah) ಕುಟುಂಬದವರ ಒತ್ತಾಯಕ್ಕೆ ಮಣಿದು ಸಕ್ರಿಯ ರಾಜಕಾರಣದಿಂದ (active politics) ಹಿಂದೆ ಸರಿಯುತ್ತಿದ್ದು ಇನ್ನು ಚುನಾವಣೆಯಲ್ಲಿ ಸ್ಪರ್ಧಿಸಲ್ಲ ಎಂದು ಹೇಳಿದ್ದರು. ಆದರೆ, ಅವರೀಗ ಪಕ್ಷದ ಹೈಕಮಾಂಡ್ (high command) ಒತ್ತಡಕ್ಕೆ ಮಣಿದು ನಿರ್ಧಾರ ಬದಲಿಸಿರುವುದಾಗಿ ಹೇಳುತ್ತಿದ್ದಾರೆ. ತಾವು ಗೆದ್ದು ಪಕ್ಷವನ್ನೂ ಗೆಲ್ಲಿಸಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಪುನಃ ಮುಖ್ಯಮಂತ್ರಿ ಮಾಡುವುದೇ ತಮ್ಮ ಗುರಿ ಎಂದು ವೀರಭದ್ರಯ್ಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada