ಬಿಜಿಎಸ್ ಉತ್ಸತ 2022: ಬಿಜೆಪಿ ನಾಯಕರೊಂದಿಗೆ ಕಾಣಿಸಿಕೊಂಡ ಕಾಂಗ್ರೆಸ್ ನಾಯಕಿ ರಮ್ಯಾ

ವೇದಿಕೆಯ ಮೇಲೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್ ಅಶೋಕ, ಎಸ್ ಟಿ ಸೋಮಶೇಖರ್ ಮತ್ತು ಸುರಪುರ ಶಾಸಕ ರಾಜುಗೌಡ ಮೊದಲಾದವರನ್ನು ನೋಡಬಹುದು.

TV9kannada Web Team

| Edited By: Arun Belly

Nov 24, 2022 | 2:10 PM

ಬೆಂಗಳೂರು:  14ನೇ ಬಿಜಿಎಸ್ ಸಂಸ್ಥಾಪಕರ ದಿನಾಚರಣೆ ಅಂಗವಾಗಿ ಆದಿಚುಂಚನಗಿರಿ ಮಹಾಸಂಸ್ಥಾನದ ವತಿಯಿಂದ ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಬಿಜಿಎಸ್ ಉತ್ಸವ 2022 (BGS Utsav 2022) ಕಾರ್ಯಕ್ರಮದಲ್ಲಿ ಚಿತ್ರನಟಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕಿ ರಮ್ಯಾ (Ramya) ಬಿಜೆಪಿ ನಾಯಕರ ಜೊತೆ ಕಾಣಿಸಿಕೊಂಡರು. ಉತ್ಸವದ ಭಾಗವಾಗಿ ನಡೆದ ಬಿಜಿಎಸ್ ಜಿಮ್ಸ್ ಗ್ರಂಥಾಲಯ (library) ಉದ್ಘಾಟನೆ ಸಮಾರಂಭದಲ್ಲಿ ರಮ್ಯಾ ಪಾಲ್ಗೊಂಡಿದ್ದರು. ವೇದಿಕೆಯ ಮೇಲೆ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಆರ್ ಅಶೋಕ, ಎಸ್ ಟಿ ಸೋಮಶೇಖರ್ ಮತ್ತು ಸುರಪುರ ಶಾಸಕ ರಾಜುಗೌಡ ಮೊದಲಾದವರನ್ನು ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada