ಉಮೇಶ ಕತ್ತಿ ವಿಧಿವಶ: ದೊಡ್ಡಬಳ್ಳಾಪುರದಲ್ಲಿ ನಾಳೆ ನಡೆಯಬೇಕಿದ್ದ ಬಿಜೆಪಿಯ ಜನೋತ್ಸವ ರದ್ದಾಗುವ ನಿರೀಕ್ಷೆ!
ಏತನ್ಮಧ್ಯೆ, ದೊಡ್ಡಬಳ್ಳಾಪುರದಲ್ಲಿ ಜನೋತ್ಸವದ ಸಿದ್ಧತೆಗಳು ನಡೆಯುತ್ತಿವೆ. ಅಡುಗೆಯವರು ತರಕಾರಿಗಳನ್ನು ಹೊಂದಿಸಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ದೊಡ್ಡಬಳ್ಳಾಪುರ: ಸಚಿವ ಉಮೇಶ ಕತ್ತಿ ಅವರ ಸಾವಿನ ಹಿನ್ನೆಲೆಯಲ್ಲಿ ನಾಳೆ (ಗುರುವಾರ) ದೊಡ್ಡಬಳ್ಳಾಪುರದಲ್ಲಿ (Doddaballapura) ಬಿಜೆಪಿ ಹಮ್ಮಿಕೊಂಡಿರುವ ಜನೋತ್ಸವ (Janotsava) ಕಾರ್ಯಕ್ರಮ ರದ್ದಾಗುವ ಸುಳಿವಿದೆ. ಆದರೆ ಬಿಜೆಪಿ ನಾಯಕರಿಂದ ಅಥವಾ ಮುಖ್ಯಮಂತ್ರಿಗಳಿಂದ ಅಧಿಕೃತ ಘೋಷಣೆಯೇನೂ (official announcement) ಆಗಿಲ್ಲ. ಹಾಗೆ ನೋಡಿದರೆ, ಮುಖ್ಯಮಂತ್ರಿಗಳು ಮೂರು ದಿನಗಳ ಬದಲಿಗೆ ಕೇವಲ ಒಂದು ದಿನದ ಶೋಕಾಚರಣೆಯನ್ನು ಮಾತ್ರ ಘೋಷಿಸಿರುವುದರಿಂದ ಕಾರ್ಯಕ್ರಮ ನಡೆಯಬಹುದು ಅಂತಲೂ ಹೇಳಲಾಗುತ್ತಿದೆ. ಏತನ್ಮಧ್ಯೆ, ದೊಡ್ಡಬಳ್ಳಾಪುರದಲ್ಲಿ ಜನೋತ್ಸವದ ಸಿದ್ಧತೆಗಳು ನಡೆಯುತ್ತಿವೆ. ಅಡುಗೆಯವರು ತರಕಾರಿಗಳನ್ನು ಹೊಂದಿಸಿಕೊಳ್ಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.