ಉಮೇಶ ಕತ್ತಿ ವಿಧಿವಶ: ಮುಂದೊಂದು ದಿನ ಸಿಎಮ್ ಆಗೇಆಗ್ತೀನಿ ಅಂತ ಕತ್ತಿ ಹೇಳಿದ ವಿಡಿಯೋ ಈಗ ವೈರಲ್!
ಸದ್ಯಕ್ಕಂತೂ ಮುಖ್ಯಮಂತ್ರಿಯಾಗುವ ಅವಕಾಶವಿಲ್ಲ, ಆದರೆ 9 ಬಾರಿ ಶಾಸಕನಾಗಿರುವ (MLA) ತನಗೆ ಮುಂದೆ ಖಂಡಿತವಾಗಿಯೂ ಚಾನ್ಸ್ ಸಿಗುತ್ತದೆ ಎಂದು ಅವರು ಹೇಳಿರುವುದನ್ನು ಕೇಳಿಸಿಕೊಳ್ಳಬಹುದು.
ಮಂಗಳವಾರ ರಾತ್ರಿ ಹೃದಯಾಘಾತದಿಂದ (heart attack) ನಿಧನರಾದ ಉಮೇಶ್ ಕತ್ತಿ ಅವರಿಗೆ ಮುಂದೊಂದು ದಿನ ಮುಖ್ಯಮಂತ್ರಿಯಾಗುವ (chief minister) ಬಗ್ಗೆ ಬಲವಾದ ನಂಬಿಕೆಯಿತ್ತು. ಆಗಸ್ಟ್ ನಲ್ಲಿ ಸಿ ಎಮ್ ಅಗೇ ಆಗ್ತೀನಿ ಅವರು ಪತ್ರಕರ್ತರಿಗೆ ಹೇಳಿದ ವಿಡಿಯೋವೊಂದು ಅವರ ನಿಧನ ಹೊಂದಿದ ಬಳಿಕ ವೈರಲ್ ಆಗಿದೆ. ಸದ್ಯಕ್ಕಂತೂ ಮುಖ್ಯಮಂತ್ರಿಯಾಗುವ ಅವಕಾಶವಿಲ್ಲ, ಆದರೆ 9 ಬಾರಿ ಶಾಸಕನಾಗಿರುವ (MLA) ತನಗೆ ಮುಂದೆ ಖಂಡಿತವಾಗಿಯೂ ಚಾನ್ಸ್ ಸಿಗುತ್ತದೆ ಎಂದು ಅವರು ಹೇಳಿರುವುದನ್ನು ಕೇಳಿಸಿಕೊಳ್ಳಬಹುದು.
Latest Videos