ಬೆಳಗಾವಿಯ ಕಾಗವಾಡದಲ್ಲಿ ವಿಜಯ ಸಂಕಲ್ಪ ಯಾತ್ರೆ ಭರ್ಜರಿಯಾಗಿತ್ತು, ಆದರೆ ಲೀಡ್ ಮಾಡುತ್ತಿದ್ದ ನಾಯಕರಲ್ಲಿ ಮುಖದಲ್ಲಿ ಮಾತ್ರ ಪ್ರೇತಕಳೆ!
ನಡುವೆ ಲಕ್ಷ್ಮಣ ಸವದಿ ನಡುವೆ ನಿಂತಿದ್ದಾರೆ, ಅವರ ಬಲಭಾಗಕ್ಕೆ ಶಶಿಕಲಾ ಜೊಲ್ಲೆ, ಎಡಭಾಗಕ್ಕೆ ರಮೇಶ್ ಜಾರಕಿಹೊಳಿ ಇದ್ದಾರೆ. ಸವದಿ ಗಂಟುಮೋರೆ ಹೊತ್ತು ನಿಂತಿದ್ದರೆ ಜಾರಕಿಹೊಳಿ ಮುಖದಲ್ಲಿ ಅನ್ಯಮನಸ್ಕತೆ.
ಬೆಳಗಾವಿ: ಜಿಲ್ಲೆಯ ಕಾಗವಾಡ ತಾಲ್ಲೂಕಿನ ಐನಾಪುರ ಗ್ರಾಮದಲ್ಲಿ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆ ಭರ್ಜರಿಯಾಗಿ ನಡೆಯಿತು ಅನ್ನೋದು ನಿಸ್ಸಂಶಯ. ಆದರೆ ಯಾತ್ರೆಯನ್ನು ಲೀಡ್ ಮಾಡುತ್ತಿದ್ದ ಪಕ್ಷದ ಮೂವರು ನಾಯಕರಲ್ಲೇ ಸೌಹಾರ್ದತೆ, ಸಂವಹನದ ಕೊರತೆ ನೋಡುಗರಿಗೆ ಎದ್ದುಕಾಣುತಿತ್ತು. ವಿಡಿಯೋವನ್ನು ವೀಕ್ಷಿಸಿದರೆ ಅದು ಗೊತ್ತಾಗುತ್ತದೆ. ನಡುವೆ ಲಕ್ಷ್ಮಣ ಸವದಿ ನಡುವೆ ನಿಂತಿದ್ದಾರೆ, ಅವರ ಬಲಭಾಗಕ್ಕೆ ಶಶಿಕಲಾ ಜೊಲ್ಲೆ, ಎಡಭಾಗಕ್ಕೆ ರಮೇಶ್ ಜಾರಕಿಹೊಳಿ ಇದ್ದಾರೆ. ಸವದಿ ಗಂಟುಮೋರೆ ಹೊತ್ತು ನಿಂತಿದ್ದರೆ ಜಾರಕಿಹೊಳಿ ಮುಖದಲ್ಲಿ ಅನ್ಯಮನಸ್ಕತೆ. ಎಲ್ಲಿ ಬಂದು ಸಿಕ್ಹಾಕಿಕೊಂಡ್ನೋ ಯಪ್ಪಾ ಎಂಬ ಭಾವ! ಶಶಿಕಲಾ ಕಾಟಾಚಾರಕ್ಕೆ ಆಗೊಮ್ಮೆ ಈಗೊಮ್ಮೆ ಸವದಿ ಜೊತೆ ಮಾತಾಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ