Ravi in Yadgir: ಕೆಸಿ ನಾರಾಯಣಗೌಡ ಮತ್ತು ವಿ ಸೋಮಣ್ಣ ಬಗ್ಗೆ ಕೇಳಿದರೆ ಸಿಟಿ ರವಿ ಊಹಾಪೋಹದ ಪ್ರಶ್ನೆ ಎನ್ನುತ್ತಾರೆ!
ಇಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸೋಮಣ್ಣ ಮತ್ತು ನಾರಾಯಣಗೌಡರ ಬಗ್ಗೆ ಮಾತಾಡಿದ ಶಾಸಕ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ ಊಹಾಪೋಹದ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ ಎನ್ನುತ್ತಾರೆ.
ಯಾದಗಿರಿ: ಕೆಸಿ ನಾರಾಯಣ ಗೌಡ (KC Narayana Gowda) ಮತ್ತು ವಿ ಸೋಮಣ್ಣ (V Somanna) ಅವರು ಪಕ್ಷ ತೊರೆಯುವ ನಿರ್ಧಾರ ಮಾಡಿರುವ ಬಗ್ಗೆ ದಿನೇದಿನೆ ಹಬ್ಬುತ್ತಿರುವ ವದಂತಿಗಳನ್ನು ಬಿಜೆಪಿ ನಾಯಕರು ಉಪೇಕ್ಷಿಸುತ್ತಿದ್ದಾರೆಯೇ? ಅಥವಾ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆಯೇ? ಯಾಕೆಂದರೆ ಒಂದೆಡೆ ಬಿಎಸ್ ಯಡಿಯೂರಪ್ಪನವರು ಹೋಗೋರನ್ನು ತಡೆಯಲಾಗುತ್ತಾ ಅನ್ನುತ್ತಾರೆ ಮತ್ತೊಂದೆಡೆ ಇಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಮಾತಾಡಿದ ಶಾಸಕ ಮತ್ತು ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಸಿಟಿ ರವಿ (CT Ravi), ಊಹಾಪೋಹದ ಪ್ರಶ್ನೆಗಳಿಗೆ ಉತ್ತರ ನೀಡುವುದಿಲ್ಲ ಎನ್ನುತ್ತಾರೆ. ಬೆಂಕಿಯಿಲ್ಲದೆ ಹೊಗೆಯಾಡುತ್ತಾ ಮಾರಾಯ್ರೇ?
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 09, 2023 04:22 PM
Latest Videos