ಬೆಂಗಳೂರಿನ ಜನರಿಗೆ ಬಿಗ್ ಶಾಕ್: ಸರ್ಕಾರ ಬಿಎಂಟಿಸಿ ಬಸ್ ಪ್ರಯಾಣ ದರ ಎಷ್ಟು ಏರಿಕೆ ಮಾಡಿದೆ ನೋಡಿ
ಬಿಎಂಟಿಸಿ ಬಸ್ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ. ಸಾರಿಗೆ ಸಚಿವ ಬೈರತಿ ಸುರೇಶ್ ಅವರು ದರ ಪರಿಷ್ಕರಣೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಕನಿಷ್ಠ ದರ 6 ರೂಪಾಯಿಯಿಂದ 10 ರೂಪಾಯಿಗೆ ಏರಿಕೆಯಾಗಿದ್ದು, ಸಾಮಾನ್ಯ ಬಸ್‌ಗಳ ಗರಿಷ್ಠ ದರ 35 ರೂಪಾಯಿಯಿಂದ 45 ರೂಪಾಯಿಗೆ ತಲುಪಿದೆ. ವಜ್ರ ಬಸ್‌ಗಳ ದರವೂ ಹೆಚ್ಚಳವಾಗಿದೆ.
ಬೆಂಗಳೂರು, ನ.4: ಹಾಲಿನ ದರ ಏರಿಕೆ ಶಾಕ್ನಿಂದಲ್ಲೆ ರಾಜ್ಯದ ಜನ ಹೊರಗೆ ಬಂದಿಲ್ಲ. ಇದೀಗ ಸಾರಿಗೆ ದರ ಏರಿಕೆಯ ಅಘಾತವನ್ನು ಸರ್ಕಾರ ನೀಡಿದೆ. ಕೆಎಸ್ಆರ್ಟಿಸಿ ಬಸ್ಗೆ 9 ರೂ, ದರವನ್ನು ಹೆಚ್ಚಳ ಮಾಡಲಾಗಿದೆ. ಇದರ ಜತೆಗೆ ಕರ್ನಾಟಕದಲ್ಲಿ ಬಿಎಂಟಿಸಿ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ) ಬಸ್ ಪ್ರಯಾಣ ದರವನ್ನು ಪರಿಷ್ಕರಿಸಲಾಗಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಘೋಷಿಸಿದ್ದಾರೆ. ಹೊಸ ದರಗಳು ಹಂತ ಹಂತವಾಗಿ ಜಾರಿಗೆ ಬರಲಿವೆ. ಪರಿಷ್ಕೃತ ದರಗಳ ಪ್ರಕಾರ, ಬಿಎಂಟಿಸಿಯ ಸಾಮಾನ್ಯ ಬಸ್‌ಗಳ ಕನಿಷ್ಠ ದರ 6 ರೂಪಾಯಿಯಿಂದ 10 ರೂಪಾಯಿಗೆ ಏರಿಕೆಯಾಗಿದೆ. ಅದೇ ರೀತಿ, ಸಾಮಾನ್ಯ ಬಸ್‌ಗಳ ಗರಿಷ್ಠ ದರ 35 ರೂಪಾಯಿಯಿಂದ 45 ರೂಪಾಯಿಗೆ ಹೆಚ್ಚಳವಾಗಿದೆ. ವಜ್ರ ಬಸ್ ಸೇವೆಗಳಲ್ಲೂ ದರ ಹೆಚ್ಚಳ ಘೋಷಿಸಲಾಗಿದೆ. ವಜ್ರ ಬಸ್‌ಗಳ ಕನಿಷ್ಠ ದರ 15 ರೂಪಾಯಿಯಿಂದ 20 ರೂಪಾಯಿಗೆ ಹಾಗೂ ಗರಿಷ್ಠ ದರ (60 ಕಿ.ಮೀ. ಪ್ರಯಾಣಕ್ಕೆ) 75 ರೂಪಾಯಿಯಿಂದ 90 ರೂಪಾಯಿಗೆ ಹೆಚ್ಚಳವಾಗಿದೆ ಎಂದು ಸಚಿವ ಸುರೇಶ್ ಸ್ಪಷ್ಟಪಡಿಸಿದ್ದಾರೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
