ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಬಾಲಕ ಸ್ಥಳದಲ್ಲೇ ಸಾವು
ಬೆಂಗಳೂರಿನ ಹಲಸೂರು ಗೇಟ್‌ನಲ್ಲಿ ಬಿಎಂಟಿಸಿ ಬಸ್ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶಬರೀಶ್ ಎಂಬ ಬಾಲಕ ಕೆ.ಆರ್. ಮಾರ್ಕೆಟ್‌ಗೆ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ಬೈಕಿನಲ್ಲಿದ್ದಾಗ ಈ ಅಪಘಾತ ಸಂಭವಿಸಿದೆ. ಬಸ್ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬಾಲಕ ರಸ್ತೆಗೆ ಬಿದ್ದಿದ್ದಾನೆ ಮತ್ತು ಬಸ್ ಅವನ ಮೇಲೆ ಹರಿದಿದೆ. ಈ ದುರಂತದಿಂದಾಗಿ ಬಾಲಕನ ಕುಟುಂಬ ಆಘಾತಕ್ಕೀಡಾಗಿದೆ.
ಬೆಂಗಳೂರು, ಆಗಸ್ಟ್ 24: ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಬಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಲಸೂರು ಗೇಟ್ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅರ್ಚಕ ದಿಲೀಪ್ ಕುಮಾರ್ ಅವರ ಅಣ್ಣನ ಮಗ ಶಬರೀಶ್ (10) ಮೃತದುರ್ದೈವಿ. ಅರ್ಚಕ ದಿಲೀಪ್ ಕುಮಾರ್ ಜಿ.ಎಂ.ಪಾಳ್ಯದ ನಿವಾಸಿಯಾಗಿದ್ದಾರೆ. ಶಬರೀಶ್ ಚಿಕ್ಕಪ್ಪ, ಚಿಕ್ಕಮ್ಮನ ಜೊತೆ ಕೆ.ಆರ್.ಮಾರ್ಕೆಟ್‌ಗೆ ಬಂದಿದ್ದನು. ಈ ವೇಳೆ ಬೈಕ್‌ಗೆ ಬಸ್ ಟಚ್ ಆಗಿದ್ದರಿಂದ ಶಬರೀಶ್ ಕೆಳಗೆಬಿದ್ದಿದ್ದಾನೆ. ಶಬರೀಶ್ ಮೇಲೆ ಬಿಎಂಟಿಸಿ ಬಸ್ ಹರಿದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ದಿಲೀಪ್ ಕುಮಾರ್ ದಂಪತಿ ಆಕ್ರಂದನ ಮುಗಿಲು ಮುಟ್ಟಿದೆ.
ವರದಿ: ವಿಕಾಸ್ ಟಿವಿ9 ಬೆಂಗಳೂರು
