AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಚ್​​ಡಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಪುತ್ರ ನಿಖಿಲ್

ಎಚ್​​ಡಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಬಿಗ್ ಅಪ್ಡೇಟ್ ಕೊಟ್ಟ ಪುತ್ರ ನಿಖಿಲ್

ರಮೇಶ್ ಬಿ. ಜವಳಗೇರಾ
|

Updated on: Aug 24, 2025 | 5:35 PM

Share

ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಆರೋಗ್ಯ ಹದಗೆಟ್ಟಿದಂತಿದೆ. ಯಾಕಂದ್ರೆ ಅವರ ಫೋಟೋವನ್ನು ನೋಡುತ್ತಿದ್ದರೆ ಕೈಗಳು ಸಣ್ಣದಾಗಿದ್ದು, ಮುಖದಲ್ಲಿ ಕಾಂತಿ ಕಾಣಿಸುತ್ತಿಲ್ಲ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ತೀವ್ರ ಚರ್ಚೆಗಳಾಗುತ್ತಿವೆ. ಇನ್ನು ಈ ಸಂಬಂದ ಇದೀಗ ಸ್ವತಃ ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಆರೋಗ್ಯ ಚೆನ್ನಾಗಿದೆ, ಯಾರೂ ಆತಂಕ ಪಡಬೇಕಿಲ್ಲ ಎಂದಿದ್ದಾರೆ.

ದೇವನಹಳ್ಳಿ(ಬೆಂಗಳೂರು), (ಆಗಸ್ಟ್ 24): ಕೇಂದ್ರ ಸಚಿವ ಎಚ್. ಡಿ.ಕುಮಾರಸ್ವಾಮಿ ಆರೋಗ್ಯ ಹದಗೆಟ್ಟಿದಂತಿದೆ. ಯಾಕಂದ್ರೆ ಅವರ ಫೋಟೋವನ್ನು ನೋಡುತ್ತಿದ್ದರೆ ಕೈಗಳು ಸಣ್ಣದಾಗಿದ್ದು, ಮುಖದಲ್ಲಿ ಕಾಂತಿ ಕಾಣಿಸುತ್ತಿಲ್ಲ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ತೀವ್ರ ಚರ್ಚೆಗಳಾಗುತ್ತಿವೆ. ಇನ್ನು ಈ ಸಂಬಂದ ಇದೀಗ ಸ್ವತಃ ಪುತ್ರ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು, ಕುಮಾರಸ್ವಾಮಿ ಆರೋಗ್ಯ ಚೆನ್ನಾಗಿದೆ, ಯಾರೂ ಆತಂಕ ಪಡಬೇಕಿಲ್ಲ. ಕೊನೆ ಉಸಿರಿರುವವರೆಗೂ ಜನಸೇವೆಗೆ ಬದುಕನ್ನ ಮುಡಿಪಿಟ್ಟಿದ್ದಾರೆ. ದೇವೇಗೌಡರು ಸಹ ರಾಜಕೀಯದಿಂದ ವಿಶ್ರಾಂತಿ ತೆಗೆದುಕೊಂಡಿಲ್ಲ. ದೇವೇಗೌಡರ ಕುಟುಂಬಕ್ಕೆ ಜನರೇ ರಾಜಕೀಯ ಶಕ್ತಿ ತುಂಬಿದ್ದಾರೆ. ಅದನ್ನ ಜನರಿಗೆ ವಾಪಸ್ ಧಾರೆ ಎರೆಯುವ ಕೆಲಸ ಮಾಡಬೇಕಿದೆ. ಸಣ್ಣಪುಟ್ಟ ಏರುಪೇರಾಗಿದ್ದು ಸತ್ಯ, ಆದ್ರೆ ಈಗ ಚೇತರಿಕೆಯಾಗುತ್ತಿದೆ. ಇದರ ಮಧ್ಯೆ ಪ್ರತಿನಿತ್ಯ ಇಲಾಖೆಯ ಸಭೆಗಳನ್ನು ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ ಕುಮಾರಸ್ವಾಮಿ ಆರೋಗ್ಯದಲ್ಲಿ ಏರುಪೇರಾಗಿರುವುದನ್ನು ಒಪ್ಪಿಕೊಂಡರು.