ಮೂರನೇ ಅಲೆ ಎದುರಿಸಲು ಕರ್ನಾಟಕ ಸರ್ಕಾರ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ, ಬಿಬಿಎಂ​ಪಿಯೂ ಸನ್ನದ್ಧವಾಗಿದೆ

ಅದಕ್ಕೆ ತಕ್ಕ ಹಾಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹ ಕಾರ್ಯೋನ್ಮುಖಗೊಂಡು ಜನರಿಗೆ ಎಚ್ಚರದಿಂದಿರಲು, ಲಸಿಕೆ ಹಾಕಿಸಿಕೊಳ್ಳಲು ಆಗ್ರಹಿಸುತ್ತಿದೆ.

ನಾವು ಈ ಸಂಗತಿಯನ್ನು ಪದೇಪದೆ ಚರ್ಚಿಸುತ್ತಿದ್ದೇವೆ. ಒಮೈಕ್ರಾನ್ ರೂಪಾಂತರಿಯನ್ನು ನಾವ್ಯಾರೂ ಹಗುರವಾಗಿ ಪರಿಗಣಿಸುವಂತಿಲ್ಲ. ರಾಜ್ಯ ಕೊವಿಡ್ ಟಾಸ್ಕ್ ಫೋರ್ಸ್ ಚೇರ್ಮನ್ ಡಾ ದೇವಿಪ್ರಸಾದ್ ಶೆಟ್ಟಿ ಅದನ್ನೇ ಹೇಳಿದ್ದಾರೆ. ಅದು ಬೇರೆ ಬೇರೆ ದೇಶಗಳಲ್ಲಿ ಕಾಣಿಸಿಕೊಂಡಿದೆ ಎಂದರೆ, ಭಾರತದಲ್ಲೂ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಕರ್ನಾಟವೂ ಸೇರಿದಂತೆ ಎಲ್ಲ ರಾಜ್ಯಗಳ ಸರ್ಕಾರಗಳು ಸಾಧ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಜಾರಿಗೆ ತರುತ್ತಿವೆ. ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸರ್ಕಾರ ಯಾವ ಹಂತದಲ್ಲೂ ಎಚ್ಚರ ತಪ್ಪುವುದಿಲ್ಲ ಎಂಬ ಆಶ್ವಾಸನೆಯನ್ನು ಜನತೆಗೆ ನೀಡುತ್ತಲೇ ಇದ್ದಾರೆ.

ಅದಕ್ಕೆ ತಕ್ಕ ಹಾಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಹ ಕಾರ್ಯೋನ್ಮುಖಗೊಂಡು ಜನರಿಗೆ ಎಚ್ಚರದಿಂದಿರಲು, ಲಸಿಕೆ ಹಾಕಿಸಿಕೊಳ್ಳಲು ಆಗ್ರಹಿಸುತ್ತಿದೆ. ಮಂಗಳವಾರ ಬೆಂಗಳೂರಿನ ಐಕಾನಿಕ್ ಕೆ ಅರ್ ಮಾರ್ಕೆಟ್ನಲ್ಲಿ ವ್ಯಾಪಾರ ಮಾಡುವ ಜನರಿಗೆ ಲಸಿಕೆ ಹಾಕಿಸಿಕೊಳ್ಳಲು ಬಿ ಬಿ ಎಮ್ ಪಿಯ ಮಹಿಳಾ ಮಾರ್ಷಲೊಬ್ಬರು ಕೈಯಲ್ಲಿ ಧ್ವನಿವರ್ಧಕ ಹಿಡಿದು ಘೋಷಣೆ ಮಾಡುತ್ತಿದ್ದರು.

ಅವರು ಹೇಳುತ್ತಿರುವುದನ್ನು ಗಮನವಿಟ್ಟು ಕೇಳಿಸಿಕೊಳ್ಳಿ. ಲಸಿಕೆಯ ಎರಡೂ ಡೋಸ್ ಹಾಕಿಸಿಕೊಳ್ಳದವರಿಗೆ ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುವ ಅವಕಾಶ ನೀಡಲಾಗದು ಅಂತ ಹೇಳುತ್ತಿದ್ದಾರೆ.

ಅದರರ್ಥ ಸರ್ಕಾರ ಈ ಬಾರಿ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುತ್ತಿದೆ. ಯಾವುದೇ ಚಾನ್ಸ್ ತೆಗೆದುಕೊಳ್ಳಲು ಅದು ತಯಾರಿಲ್ಲ. ಮತ್ತೊಂದು ಗಮನಾರ್ಹ ಸಂಗತಿ ಎಂದರೆ, ಮಾರ್ಕೆಟ್ ನಲ್ಲೇ ಲಸಿಕಾ ಕೇಂದ್ರವೊಂದನ್ನು ಸ್ಥಾಪಿಸಲಾಗಿದೆ. ವ್ಯಾಪಾರಿಗಳು ದೂರ ಹೋಗುವ ಪ್ರಮೇಯವೇನೂ ಇಲ್ಲ. ಅವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.

ಇದನ್ನೂ ಓದಿ:  ಯಲಹಂಕ ಬಿಜೆಪಿ ಶಾಸಕ ಎಸ್ ಆರ್ ವಿಶ್ವನಾಥ್ ಹತ್ಯೆಗೆ ಸ್ಕೆಚ್! ವಿಶ್ವನಾಥ್ ವಿರುದ್ಧ ಸ್ಪರ್ಧಿಸಿ ಸೋತಿದ್ದ ಗೋಪಾಲಕೃಷ್ಣ ವಿಡಿಯೋ ಬಹಿರಂಗ

Published On - 9:19 am, Thu, 2 December 21

Click on your DTH Provider to Add TV9 Kannada