ಎಮ್ ಜಿ ಆಸ್ಟರ್ ಎಸ್ಯುವಿಯ ಬುಕಿಂಗ್ ಆರಂಭವಾಗಿದ್ದು,ಕಾರು ಅಕ್ಟೋಬರ್ನಲ್ಲಿ ರಸ್ತೆಗಿಳಿಯಲಿದೆ!
ಆಸ್ಟರ್ ಕಾರಿನ ಬೆಲೆ (ಎಕ್ಸ್ ಶೋ ರೂಂ) ರೂ. 10 ಲಕ್ಷಗಳಿಂದ ಆರಂಭವಾಗುವ ನಿರೀಕ್ಷೆಯಿದೆ. ಅಕ್ಟೋಬರ್ 2021 ರಲ್ಲಿ ಎಂಜಿ ಸಂಸ್ಥೆಯು ಭಾರತದಲ್ಲಿ ಆಸ್ಟರ್ ಕಾರನ್ನು ಅನ್ನು ಬಿಡುಗಡೆ ಮಾಡಬಹುದೆಂದು ಹೇಳಲಾಗುತ್ತಿದೆ.
ಹಾಗೆ ನೋಡಿದರೆ, ಎಮ್ ಜಿ ಆಸ್ಟರ್ ಎಸ್ ಯು ವಿ ಅಕ್ಟೋಬರ್ 2021 ರಲ್ಲಿ ಲಾಂಚ್ ಆಗಬೇಕಿದೆ. ಆದರೆ ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಆಸ್ಟರ್ ಕಾರನ್ನು ಬುಕ್ ಮಾಡಲು ಬಹಳ ದಿನ ಕಾಯಬೇಕಿಲ್ಲ. ಯಾಕೆ ಗೊತ್ತಾ? ಈ ಕಾರಿನ ಅನಧಿಕೃತ ಬುಕಿಂಗ್ ರೂ. 50,000 ಗಳ ಟೋಕನ್ ಮುಂಗಡ ಹಣದೊಂದಿಗೆ ಈಗಾಗಲೇ ಶುರುವಾಗಿದೆ. ಎಮ್‌ಜಿ ಆಸ್ಟರ್ ಸೆಗ್ಮೆಂಟ್ ಫಸ್ಟ್ ಎಡಿಎಎಸ್‌ನೊಂದಿಗೆ ಗ್ರಾಹಕರಿಗೆ ಲಭ್ಯವಾಗಲಿದೆ. ಇದರಲ್ಲಿ ಫಾರ್ವರ್ಡ್ ಅಪಘಾತ ಎಚ್ಚರಿಕೆ ಸಂದೇಶ, ಸ್ವಾಯತ್ತ ತುರ್ತು ಬ್ರೇಕಿಂಗ್ ಸಿಸ್ಟಮ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಕೀಪಿಂಗ್ ಅಸಿಸ್ಟ್ ಮತ್ತು ಹೈ-ಬೀಮ್ ಅಸಿಸ್ಟ್- ಎಲ್ಲ ಫೀಚರ್ಗಳು ಸೇರಿವೆ.
ಕಾರಿನ ಇತರ ವೈಶಿಷ್ಟ್ಯಗಳೆಂದರೆ 10.1-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಪಲ್ ಕಾರ್‌ಪ್ಲೇ ಮತ್ತು ಆಂಡ್ರಾಯ್ಡ್ ಆಟೋ, ಸಂಪರ್ಕಿತ ಕಾರ್ ಟೆಕ್, 7 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವಾಯ್ಸ್ ಕಮಾಂಡ್ ಆಧಾರಿತ ಕಾರ್ಯಗಳೊಂದಿಗೆ AI- ಚಾಲಿತ ವಿಶೇಷತೆಗಳು. ವಿಹಂಗಮ ಸನ್ ರೂಫ್, 6-ವೇ ಪವರ್ ಚಾಲಕ ಆಸನ, ವೈರ್ಲೆಸ್ ಫೋನ್ ಚಾರ್ಜರ್ ಮತ್ತು ಸ್ವಯಂಚಾಲಿತ ಹವಾಮಾನ ನಿಯಂತ್ರಣ. ಸುರಕ್ಷತೆಯನ್ನು ಭದ್ರಪಡಿಸಲು ಬಹು ಸಂಖ್ಯೆಯ ಏರ್‌ಬ್ಯಾಗ್‌ಗಳು, ಬೆಟ್ಟದ ಡಿಸೆಂಟ್ ನಿಯಂತ್ರಣ, ಎಲೆಕ್ಟ್ರಾನಿಕ್ ಸ್ಥಿರತೆ ನಿಯಂತ್ರಣ ಮತ್ತು 360 ಡಿಗ್ರಿ ಕ್ಯಾಮರಾ ಮೊದಲಾದವುಗಳನ್ನು ಆಸ್ಟರ್ ಹೊಂದಿದೆ.
ಆಸ್ಟರ್ ಕಾರಿನ ಬೆಲೆ (ಎಕ್ಸ್ ಶೋ ರೂಂ) ರೂ. 10 ಲಕ್ಷಗಳಿಂದ ಆರಂಭವಾಗುವ ನಿರೀಕ್ಷೆಯಿದೆ. ಅಕ್ಟೋಬರ್ 2021 ರಲ್ಲಿ ಎಂಜಿ ಸಂಸ್ಥೆಯು ಭಾರತದಲ್ಲಿ ಆಸ್ಟರ್ ಕಾರನ್ನು ಅನ್ನು ಬಿಡುಗಡೆ ಮಾಡಬಹುದೆಂದು ಹೇಳಲಾಗುತ್ತಿದೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್, ಎಂಜಿ ಹೆಕ್ಟರ್, ಟಾಟಾ ಹ್ಯಾರಿಯರ್, ನಿಸ್ಸಾನ್ ಕಿಕ್ಸ್, ಸ್ಕೋಡಾ ಕುಶಾಕ್ ಮತ್ತು ವಿಡಬ್ಲ್ಯೂ ಟೈಗುನ್ ಮೊದಲಾದ ತನ್ನ ಸೆಗ್ಮೆಂಟ್ನ ಕಾರುಗಳೊಂದಿಗೆ ಸ್ಪರ್ಧೆಗಿಳಿಯಲಿದೆ. ನೀವು ಎಮ್ ಜಿ ಮೋಟಾರ್ಸ್ ನ ಅಭಿಮಾನಿಯಾಗಿದ್ದರೆ, ನಿಮ್ಮ ಹೊಸ ಆಸ್ಟರ್ ಕಾರನ್ನು ಬುಕ್ ಮಾಡಲು ತಡವೇಕೆ?
ಇದನ್ನೂ ಓದಿ: ರೈಲಿನಲ್ಲಿ ಡೋಲಕ್ ನುಡಿಸುತ್ತಾ ಪ್ರಯಾಣಿಕರನ್ನು ರಂಜಿಸಿದ ಪುಟ್ಟ ಬಾಲಕ; ನೆಟ್ಟಿಗರು ಮೆಚ್ಚಿದ ವಿಡಿಯೋವಿದು