ಭದ್ರಾ ನಾಲೆಯ ನೀರಲ್ಲಿ ಕೊಚ್ಚಿಹೋದ ಬಾಲಕ: ಮುಂದುವರಿದ ಶೋಧ

Edited By:

Updated on: Oct 12, 2025 | 12:57 PM

ಭದ್ರಾ ನಾಲೆಯ ನೀರಲ್ಲಿ ಬಾಲಕನೋರ್ವ ಕೊಚ್ಚಿಹೋಗಿರುವ ಘಟನೆ ಲಿಂಗದಹಳ್ಳಿ ಗ್ರಾಮ ಸಮೀಪ ನಡೆದಿದೆ. ಮನೋಜ್ (9) ಕೊಚ್ಚಿ ಹೋಗಿರುವ ಬಾಲಕನಾಗಿದ್ದು, ಅಗ್ನಿಶಾಮಕದಳ ಹಾಗೂ ಈಜುಗಾರರ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಆಟೋ ತೊಳೆಯಲೆಂದು ಸಂಬಂಧಿಯೊಬ್ಬರ ಜತೆಗೆ ಬಾಲಕ ತೆರಳಿದ್ದ ವೇಳೆ ಅವಘಡ ನಡೆದಿದ್ದು, ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ, ಅಕ್ಟೋಬರ್​ 12: ಆಟೋ ತೊಳೆಯಲೆಂದು ಸಂಬಂಧಿಯೊಬ್ಬರ ಜತೆಗೆ ನಾಲೆ ಬಳಿ ಬಂದಿದ್ದ ಬಾಲಕ ನೀರಲ್ಲಿ ಕೊಚ್ಚಿ ಹೋಗಿರುವ ಘಟನೆ ತಾಲೂಕಿನ ಲಿಂಗದಹಳ್ಳಿ ಗ್ರಾಮ ಸಮೀಪದ ಭದ್ರಾ ನಾಲೆಯಲ್ಲಿ (Bhadra Canal)  ನಡೆದಿದೆ. 3ನೇ ತರಗತಿ ಓದುತ್ತಿದ್ದ ಮನೋಜ್ (9) ಕೊಚ್ಚಿ ಹೋಗಿರುವ ಬಾಲಕನಾಗಿದ್ದು, ಅಗ್ನಿಶಾಮಕದಳ ಹಾಗೂ ಈಜುಗಾರರ ಮೂಲಕ ಶೋಧ ಕಾರ್ಯ ನಡೆಸಲಾಗುತ್ತಿದೆ. ಮನೋಜ್​, ಆವರಗೆರೆ ಗೋಶಾಲೆ ನಿವಾಸಿ ಷಣ್ಮುಖಾಚಾರಿ ಎಂಬವರ ಮಗನಾಗಿದ್ದು, ಘಟನೆ ಸಂಬಂಧ ದಾವಣಗೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More