AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭದ್ರಾ ಬಲದಂಡೆ ನಾಲೆ ಒಡೆದು ನೀರು ಒಯ್ಯುತ್ತಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯಲ್ಲಿ ತಳ್ಳಾಟ

ಭದ್ರಾ ಬಲದಂಡೆ ನಾಲೆ ಒಡೆದು ನೀರು ಒಯ್ಯುತ್ತಿರುವುದನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯಲ್ಲಿ ತಳ್ಳಾಟ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 25, 2025 | 7:05 PM

Share

ದಾವಣಗೆರೆ ಮೂಲಕ ಹಾದುಹೋಗುವ ಹೆದ್ದಾರಿಯನ್ನು ಪ್ರತಿಭಟನೆಕಾರರು ಅಡ್ಡಗಟ್ಟಿ ವಾಹನಗಳ ಸಂಚಾರವನ್ನು ತಡೆದಾಗ ಪೊಲೀಸರು ಹೆದ್ದಾರಿಯನ್ನು ತೆರವುಗೊಳಿಸಲು ಧಾವಿಸುತ್ತಾರೆ. ಆಗಲೇ ಭದ್ರಾ ಬಲದಂಡೆ ಕಾಲುವೆ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಪ್ರತಿಭಟಿಸುತ್ತಿದ್ದ ಬಿಜೆಪಿ ಕಾರ್ಯಕರ್ತರು ಮತ್ತು ರೈತ ಮುಖಂಡರ ನಡುವೆ ಗಲಾಟೆ ಶುರುವಾಗುತ್ತದೆ. ಕೆಲವರನ್ನು ಪೊಲೀಸರು ವಶಕ್ಕೂ ಪಡೆಯುತ್ತಾರೆ.

ದಾವಣಗೆರೆ, ಜೂನ್ 25: ಭದ್ರಾ ಬಲದಂಡೆ ನಾಲೆ ಒಡೆದು ನೀರನ್ನು ಕುಡಿಯಲು ಬಳಸುವುದಕ್ಕೆ ಒಯ್ಯುತ್ತಿರುವುದನ್ನು ವಿರೋಧಿಸಿ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು (BJP workers) ಮತ್ತು ವಿವಿಧ ರೈತ ಸಂಘಟನೆಗಳ ಸದಸ್ಯರು ಇಂದು ದಾವಣಗೆರೆಯಲ್ಲಿ ಪ್ರತಿಭಟನೆ ನಡೆಸಿದಾಗ ಪೊಲೀಸರು, ಅರೆ ಮಿಲಿಟರಿ ಪಡೆಗಳು ಮತ್ತು ಪ್ರತಭಟನೆಕಾರರ ನಡುವೆ ಜೋರಾದ ಮಾತಿನ ಚಕಮಕಿ, ತಳ್ಳಾಟ ಮತ್ತು ನೂಕಾಟಗಳು ನಡೆದವು. ಪ್ರತಿಭಟನೆಕಾರರು ಮತ್ತು ಪೊಲೀಸರ ನಡುವೆ ಸಿಲುಕುವ ರೇಣುಕಾಚಾರ್ಯ ಜನರ ನಡುವಿನಿಂದ ತಪ್ಪಿಸಿಕೊಂಡು ಹೊರಬರಲು ಒದ್ದಾಡುತ್ತಾರೆ. ದೃಶ್ಯಗಳಲ್ಲಿ ಅವರ ಅಸಹಾಯಕತೆಯನ್ನು ನೋಡಬಹುದು.

ಇದನ್ನೂ ಓದಿ:  ಯತ್ನಾಳ್ ಹಿಂದೂ ನಾಯಕನಾಗಿದ್ದರೆ ಟೋಪಿ ಧರಿಸಿ, ಕಬಾಬ್ ತಿನ್ನುತ್ತ ಇಫ್ತಿಯಾರ್ ಕೂಟ ಏರ್ಪಡಿಸುತ್ತಿರಲಿಲ್ಲ: ರೇಣುಕಾಚಾರ್ಯ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ