ಯಡಿಯೂರಪ್ಪನವರ ಕಾಲಿನ ಧೂಳಿಗೂ ಬಸನಗೌಡ ಯತ್ನಾಳ್ ಸಮನಲ್ಲ: ಎಂಪಿ ರೇಣುಕಾಚಾರ್ಯ
ಎಲ್ಲರನ್ನೂ ಬಯ್ಯುತ್ತಾ ತಿರುಗುವುದು ಬಸನಗೌಡ ಯತ್ನಾಳ್ ಖಯಾಲಿ, ಕಾಂಗ್ರೆಸ್ ಅನ್ನು ಬಯ್ಯುತ್ತಾರೆ ಆದರೆ ಸಿದ್ದರಾಮಯ್ಯರನ್ನು ಹೊಗಳುತ್ತಾರೆ, ಅವರು ಜೆಡಿಎಸ್್ಗೆ ಹೋದಾಗ ಬಿಜೆಪಿಗೆ ಕರೆತಂದ ಯಡಿಯೂರಪ್ಪ ವಿಜಯಪುರದ ಟಿಕೆಟ್ ಸಹ ನೀಡಿದರು. ಯಡಿಯೂರಪ್ಪನವರ ಕಾಲಿನ ಧೂಳಿಗೂ ಯತ್ನಾಳ್ ಸಮನಲ್ಲ ಎಂದು ರೇಣುಕಾಚಾರ್ಯ ತಿವಿದರು.
ದಾವಣಗೆರೆ, ಮೇ 24: ಜಗಜ್ಯೋತಿ ಬಸವಣ್ಣನವರನ್ನೇ ಟೀಕಿಸಿದ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಒಬ್ಬ ಅರೆಹುಚ್ಚ, ಅವರ ಬಗ್ಗೆ ಮಾತಾಡೋದಿಕ್ಕೆ ಇಷ್ಟವಿಲ್ಲ ಅನ್ನುತ್ತಲೇ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ ಮತ್ತೊಮ್ಮೆ ವಿಜಯಪುರ ಶಾಸಕನ ವಿರುದ್ಧ ಕಿಡಿ ಕಾರಿದರು. ಒಬ್ಬ ಜನಪ್ರತಿನಿಧಿಯಾಗಿ ಯತ್ನಾಳ್, ಬಸವಣ್ಣನವರ ಆದರ್ಶಗಳನ್ನು ಜನರಿಗೆ ಹೇಳಬೇಕು, ಶರಣರ ಬದುಕಿನ ಸಂದೇಶವನ್ನು ತಿಳಿಸಬೇಕು, ಆದರೆ ಅದೆಲ್ಲವನ್ನು ಬಿಟ್ಟು ಅವರು ಬದುಕಿದ್ದರೆ ಮತ್ತೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು ಎಂದು ಹೇಳುವವ ಅರೆಹುಚ್ಚನಲ್ಲದೆ ಮತ್ತೇನು? ಬಿಎಸ್ ಯಡಿಯೂರಪ್ಪ ಮತ್ತು ಬಿವೈ ವಿಜಯೇಂದ್ರರನ್ನು ಜೈಲಿಗೆ ಕಳಿಸುವುದು ಯತ್ನಾಳ್ ಸಾಧ್ಯವಿಲ್ಲ, ಪಕ್ಷದಿಂದ ಉಚ್ಚಾಟನೆಗೊಂಡರೂ ಅವರಿಗೆ ಬುದ್ಧಿ ಬಂದಿಲ್ಲ ಎಂದು ರೇಣುಕಾಚಾರ್ಯ ಹೇಳಿದರು.
ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ ವಿಷಯದಲ್ಲಿ ಕಾಂಗ್ರೆಸ್ ನಾಯಕರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ: ರೇಣುಕಾಚಾರ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

