ಕೊರೊನಾ ಮಧ್ಯೆ ಮಾನವೀಯತೆ ಮೆರೆದ ಪೋರ, ಹಸಿವಿನಿಂದ ಬಳಲಿದ್ದ ಪುಟಾಣಿಗೆ ತಿಂಡಿ ಕೊಟ್ಟ!

| Updated By: ಸಾಧು ಶ್ರೀನಾಥ್​

Updated on: Jul 13, 2020 | 3:50 PM

[lazy-load-videos-and-sticky-control id=”68jVMAmDdME”] ಬೆಂಗಳೂರು: ಸಂಕಷ್ಟದ ನಡುವೆಯೂ ಮಾನವೀಯತೆ ಮೆರೆಯೋರು ನಿಜಕ್ಕೂ ಗ್ರೇಟ್​. ಅಂತೆಯೇ ಹಸಿವಿನಿಂದ ಬಳಲುತ್ತಿದ್ದ ಪುಟ್ಟ ಹುಡುಗಿಗೆ ಬಾಲಕನೊಬ್ಬ ತನ್ನ ಬಳಿ ಇರೋ ತಿಂಡಿ ಕೊಟ್ಟು ಮಾನವೀಯತೆ ಮೆರೆದಿರೋ ಘಟನೆ ನೆಲಮಂಗಲದ ಟೋಲ್ ಬಳಿ ನಡೆದಿದೆ. ಎಲ್ಲರಂತೆ ತನ್ನ ಊರಿನತ್ತ ತೆರಳುತ್ತಿದ್ದ 16 ವರ್ಷದ ಪವನ್,​ ಟೋಲ್​ ಬಳಿ ಬಸ್​ಗಾಗಿ ಕಾಯುತ್ತಿದ್ದ ತಾಯಿ-ಮಗಳು ಜೋಡಿಯನ್ನು ಕಂಡಿದ್ದಾನೆ. ಹಸಿವು ಮತ್ತು ಹುಷಾರಿಲ್ಲದೆ ಬಳಲುತ್ತಿದ್ದ ಪುಟ್ಟ ಹುಡುಗಿ ಅಳುತ್ತಿದ್ದನ್ನು ಕಂಡು ಪವನ್​ಗೆ  ಕರುಳು ಚುರುಕ್ ಅಂದಿದೆ. ಹಾಗಾಗಿ, ತನ್ನ […]

ಕೊರೊನಾ ಮಧ್ಯೆ ಮಾನವೀಯತೆ ಮೆರೆದ ಪೋರ, ಹಸಿವಿನಿಂದ ಬಳಲಿದ್ದ ಪುಟಾಣಿಗೆ ತಿಂಡಿ ಕೊಟ್ಟ!
Follow us on

[lazy-load-videos-and-sticky-control id=”68jVMAmDdME”]

ಬೆಂಗಳೂರು: ಸಂಕಷ್ಟದ ನಡುವೆಯೂ ಮಾನವೀಯತೆ ಮೆರೆಯೋರು ನಿಜಕ್ಕೂ ಗ್ರೇಟ್​. ಅಂತೆಯೇ ಹಸಿವಿನಿಂದ ಬಳಲುತ್ತಿದ್ದ ಪುಟ್ಟ ಹುಡುಗಿಗೆ ಬಾಲಕನೊಬ್ಬ ತನ್ನ ಬಳಿ ಇರೋ ತಿಂಡಿ ಕೊಟ್ಟು ಮಾನವೀಯತೆ ಮೆರೆದಿರೋ ಘಟನೆ ನೆಲಮಂಗಲದ ಟೋಲ್ ಬಳಿ ನಡೆದಿದೆ.

ಎಲ್ಲರಂತೆ ತನ್ನ ಊರಿನತ್ತ ತೆರಳುತ್ತಿದ್ದ 16 ವರ್ಷದ ಪವನ್,​ ಟೋಲ್​ ಬಳಿ ಬಸ್​ಗಾಗಿ ಕಾಯುತ್ತಿದ್ದ ತಾಯಿ-ಮಗಳು ಜೋಡಿಯನ್ನು ಕಂಡಿದ್ದಾನೆ. ಹಸಿವು ಮತ್ತು ಹುಷಾರಿಲ್ಲದೆ ಬಳಲುತ್ತಿದ್ದ ಪುಟ್ಟ ಹುಡುಗಿ ಅಳುತ್ತಿದ್ದನ್ನು ಕಂಡು ಪವನ್​ಗೆ  ಕರುಳು ಚುರುಕ್ ಅಂದಿದೆ. ಹಾಗಾಗಿ, ತನ್ನ ಬ್ಯಾಗ್​ನಲ್ಲಿದ್ದ ತಿಂಡಿ ಪ್ಯಾಕೆಟ್​ ಮತ್ತು ಜ್ಯೂಸ್​ ಬಾಟಲ್​ ನೀಡಿ ಮಗುವಿನ ಹಸಿವು ನೀಗಿಸಿದ್ದಾನೆ. ಈ ಮೂಲಕ ಸಂಕಷ್ಟದಲ್ಲೂ ಇತರರಿಗೆ ನೆರವಾಗಲು ಮುಂದಾಗಿದ್ದಾನೆ.

Published On - 12:53 pm, Mon, 13 July 20