ನಿಗದಿತ ಮಿತಿಗಿಂತ ಅದಾಯ ಜಾಸ್ತಿಯಿರುವ ಕುಟುಂಬಗಳ ಬಿಪಿಎಲ್ ಕಾರ್ಡುಗಳು ಮಾತ್ರ ರದ್ದಾಗಿವೆ: ಸಂತೋಷ್ ಲಾಡ್
ಕಾಂಗ್ರೆಸ್ ಶಾಸಕ ಗವಿಯಪ್ಪ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಮಾತಾಡಿದ ಸಚಿವ ಲಾಡ್, ಅನುದಾನ ನೀಡಿಲ್ಲ ಅಂತೇನಿಲ್ಲ, ಆದರೆ ಹೆಚ್ಚುವರಿ ಅನುದಾನ ನೀಡಿಲ್ಲ, ಕೆಲಸಗಳು ನಡೆಯುತ್ತಿವೆ ಮತ್ತು ಜಾರಿಯಲ್ಲಿದ್ದ ಕಾಮಗಾರಿಗಳ ಕೆಲಸ ಮುಂದುವರಿದಿದೆ ಎಂದರು.
ಬೆಂಗಳೂರು: ಕುಟುಂಬ ಯಾವುದೇ ಅಗಿರಲಿ, ಕಾರು ಹೊಂದಿರಲ್ಲಿ ಅಥವಾ ಹೊಂದಿಲ್ಲದಿರಲಿ ಅವರ ಆದಾಯ ನಿಗದಿಪಡಿಸಿರುವ ಮಿತಿಗಿಂತ ಜಾಸ್ತಿಯಿದ್ದರೆ ಅಂಥ ಕುಟುಂಬಗಳ ಬಿಪಿಎಲ್ ಕಾರ್ಡ್ ತಾನಾಗಿಯೇ ರದ್ದಾಗುತ್ತದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಹಣದ ಕೊರತೆ ಅಂತ ಪರಿಷ್ಕರಣೆ ನಡೆಯುತ್ತಿಲ್ಲ, ಕಾರ್ಮಿಕ ಇಲಾಖೆಯಲ್ಲಿ ₹ 8,500 ಕೋಟಿಯಿದೆ, ತಮ್ಮ ಇಲಾಖೆಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರಿಗಿಂತ ಕಾರ್ಮಿಕರಲ್ಲದವರು, ಲಾರಿಗಳ ಮಾಲೀಕರು ಬಿಪಿಎಲ್ ಕಾರ್ಡ್ ಗಳನ್ನು ಹೊಂದಿದ್ದಾರೆ ಎಂದು ಸಚಿವ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಡಿನೋಟಿಫಿಕೇಷನ್ ಪ್ರಕರಣದಲ್ಲಿ ಈಡಿ ಕುಮಾರಸ್ವಾಮಿಗೆ ಯಾಕೆ ನೋಟೀಸ್ ನೀಡಿಲ್ಲ? ಸಂತೋಷ್ ಲಾಡ್