ಹೊರನಾಡು ಆದಿಶಕ್ತಿ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಬ್ರಹ್ಮರಥೋತ್ಸವ ಸಂಭ್ರಮ

| Updated By: ಸಾಧು ಶ್ರೀನಾಥ್​

Updated on: Mar 15, 2024 | 10:40 AM

ಜಗನ್ಮಾತೆಯ ದರ್ಶನಕ್ಕೆ ಕಾದು ಕೂತಿರೋ ಭಕ್ತರು. ಸುಡುಬಿಸಿಲಲ್ಲಿ ತೇರನ್ನ ಎಳೆಯುತ್ತಿರೋ ಭಕ್ತಸಾಗರ. ಹೌದು... ಕಾಫಿನಾಡು ಚಿಕ್ಕಮಗಳೂರಿನ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನಪೂರ್ಣೆಯ ನೆಲೆವೀಡಾಗಿರೋ ಹೊರನಾಡಿಗೆ ವಿಶೇಷ ಸ್ಥಾನ. ಕ್ಷೇತ್ರದಲ್ಲಿ ಪ್ರತಿ ವರ್ಷ ಪಾಲ್ಗುಣ ಶುಕ್ಲ ಮಾಸದ ಅಭಿಜಿನ್ ಮಹೂರ್ತದಲ್ಲಿ ಬ್ರಹ್ಮರಥೋತ್ಸವ ನಡೆದಿದ್ದು, ನಿನ್ನೆ ಅದ್ದೂರಿಯಾಗಿ ದೇವಿಯ ರಥೋತ್ಸವ ಜರಗಿತು.

ಕಾಫಿನಾಡಿನ ಆದಿಶಕ್ತ್ಯಾತ್ಮಕ ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ನಿನ್ನೆ ಗುರುವಾರ ಬ್ರಹ್ಮರಥೋತ್ಸವ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು. ರಥೋತ್ಸವದ (Brahmarathotsava) ಅಂಗವಾಗಿ ಆದಿಶಕ್ತಿ ಅನ್ನಪೂರ್ಣೆಗೆ (Horanadu Adisakti Annapurneswari) ವಿಶೇಷ ಅಲಂಕಾರ ಹಾಗೂ ಪೂಜೆಯನ್ನ ನೇರವೇರಿಸಲಾಯ್ತು. ರಾಜ್ಯದ ಮೂಲೆ-ಮೂಲೆಗಳಿಂದ ಆಗಮಿಸಿದ ಸಾವಿರಾರು ಭಕ್ತರು ಹರಕೆ ಸಲ್ಲಿಸುವ ಮೂಲಕ ರಥೋತ್ಸವದ ಮೆರಗನ್ನ ಹೆಚ್ಚಿಸಿದ್ರು. ತೇರಿನ ಚಕ್ರಕ್ಕೆ ತೆಂಗಿನಕಾಯಿ ಹೊಡೆದು ಹರಕೆ ತೀರಿಸಿ, ಅನ್ನಪೂರ್ಣೇಶ್ವರಿಯ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದ್ರು

ಜಗನ್ಮಾತೆಯ ದರ್ಶನಕ್ಕೆ ಕಾದು ಕೂತಿರೋ ಭಕ್ತರು. ಸುಡುಬಿಸಿಲಲ್ಲಿ ತೇರನ್ನ ಎಳೆಯುತ್ತಿರೋ ಭಕ್ತಸಾಗರ. ಹೌದು… ಕಾಫಿನಾಡು ಚಿಕ್ಕಮಗಳೂರಿನ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನಪೂರ್ಣೆಯ ನೆಲೆವೀಡಾಗಿರೋ ಹೊರನಾಡಿಗೆ ವಿಶೇಷ ಸ್ಥಾನ. ಕ್ಷೇತ್ರದಲ್ಲಿ ಪ್ರತಿ ವರ್ಷ ಪಾಲ್ಗುಣ ಶುಕ್ಲ ಮಾಸದ ಅಭಿಜಿನ್ ಮಹೂರ್ತದಲ್ಲಿ ಬ್ರಹ್ಮರಥೋತ್ಸವ ನಡೆದಿದ್ದು, ನಿನ್ನೆ ಅದ್ದೂರಿಯಾಗಿ ದೇವಿಯ ರಥೋತ್ಸವ ಜರಗಿತು.

ಒಟ್ಟು ಐದು ದಿನಗಳ ಕಾಲ ನಡೆಯೋ ಈ ವಾರ್ಷಿಕ ಆಚರಣೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿ ಸಾವಿರಾರು ಭಕ್ತರು ಪಾಲ್ಗೊಂಡಿದ್ರು. ರಥೋತ್ಸವದ ಪ್ರಯುಕ್ತ ಅನ್ನಪೂರ್ಣೆಶ್ವರಿಗೆ ವಿಶೇಷ ಅಲಂಕಾರವನ್ನ ಮಾಡಲಾಗಿದ್ದು, ವಿಶೇಷ ಪೂಜೆಯನ್ನ ಸಲ್ಲಿಸಲಾಯಿತು. ಸಾವಿರಾರು ಭಕ್ತರು ಪ್ರಾರ್ಥನೆ ಮಾಡಿ ರಥವನ್ನ ಎಳೆದು ಭಕ್ತಿ ಸಮರ್ಪಿಸಿದರು. ಐದು ದಿನಗಳಿಂದ ನಡೆದ ರಥೋತ್ಸವ ನಿನ್ನೆ ಸಂಪನ್ನವಾಗಿದೆ ಎಂದು ಭೀಮೇಶ್ವರ ಜೋಷಿ, ಧರ್ಮಕರ್ತರು ತಿಳಿಸಿದರು.

ಮಧ್ಯಾಹ್ನ 12.30ರ ಸುಮಾರಿಗೆ ಅನ್ನಪೂರ್ಣೆಶ್ವರಿಗೆ ವಿಶೇಷ ಪೂಜೆಯನ್ನ ಸಲ್ಲಿಸಿ ಛತ್ರಿ ಚಾಮರಗಳ ಮೆರವಣಿಗೆಯಲ್ಲಿ ದೇವಿಯ ಮೂರ್ತಿಯನ್ನ ತಂದು ರಥದಲ್ಲಿ ಕೂರಿಸಲಾಯ್ತು. ನಂತರದ ನೆರೆದಿದ್ದ ಭಕ್ತರು ರಥಕ್ಕೆ ಕಾಯಿಯನ್ನ ಒಡೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಭಕ್ತರು ಇಷ್ಟಾರ್ಥ ಸಿದ್ದಿಗಾಗಿ ನಾನಾ ಹರಕೆಗಳನ್ನ ಸಲ್ಲಿಸಿದರು. ವರ್ಷಪೂರ್ತಿ ಗರ್ಭಗುಡಿಯಲ್ಲೇ ಕೂತು ಭಕ್ತರಿಗೆ ದರ್ಶನ ನೀಡೋ ಅನ್ನಪೂರ್ಣೇಶ್ವರಿ ವರ್ಷಕ್ಕೊಮ್ಮೆ ರಥದಲ್ಲಿ ಕೂತು ತನ್ನ ಭಕ್ತರಿಂದಲೇ ತನ್ನ ರಥವನ್ನ ಎಳೆಸಿಕೊಂಡು ಸಂತಸ ಪಟ್ಟು ದರ್ಶನ ನಿಡ್ತಾಳೆ ಅನ್ನೋ ನಂಬಿಕೆ ಭಕ್ತರದ್ದು.

ಅನ್ನಪೂರ್ಣೇಯ ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯೋ ಜಾತ್ರಾ ಮಹೋತ್ಸವಕ್ಕೆ ಜನಸಾಗರವೇ ಹರಿದುಬರುತ್ತಿದೆ. ಹಗಲಿನಲ್ಲಷ್ಟೆ ಅಲ್ಲದೆ ರಾತ್ರಿ ವೇಳೆಯೂ ವಿಶೇಷವಾದ ರಥೋತ್ಸವ ನಡೆಸಿದ್ದು. ಇಂದು ಬೆಳಗ್ಗೆ ಶಯನೋತ್ಸವ ಹಾಗೂ ಸಂಜೆ ಓಕುಳಿ ಸಂಪ್ರೋಕ್ಷಣೆಯೊಂದಿಗೆ ಪಂಚಮ ದಿನಗಳ ಕಾರ್ಯಕ್ರಮಕ್ಕೆ ತೆರೆಬಿದ್ದಿದೆ

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 10:39 am, Fri, 15 March 24